Follow Us On

WhatsApp Group
Big News
Trending

ಡ್ರೋನ್ ಹಾರಿಸಿ ಮಹಿಳೆಯರ ಖಾಸಗಿ ಫೋಟೋ , ವಿಡಿಯೋ ತೆಗೆಯುತ್ತಿದ್ದಾರೆ ಪ್ರವಾಸಿಗರು: ಡ್ರೋನ್ ಶೂಟಿಂಗ್ ನೆಪದಲ್ಲಿ ಕಿರಾತಕರ ಖತರ್ನಾಕ್ ಐಡಿಯಾ

ಪ್ರವಾಸಿಗರ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದು ಏಕೆ ನೋಡಿ?

ಇಲ್ಲಿಗೆ ಕೆಲವು ಪ್ರವಾಸಿಗರು ಡ್ರೋನ್ ಶೂಟಿಂಗ್ ನೆಪದಲ್ಲಿ ದುರುದ್ದೇಶದಿಂದಲೇ ಆಗಮಿಸುತ್ತಿದ್ದಾರೆ ಎನ್ನಲಾಗಿದ್ದು, ಇವರಿಗೆ ಈ ಪ್ರವಾಸಿ ತಾಣದ ಸುತ್ತಮುತ್ತಲ ಮನೆಗಳ ಸಂಪೂರ್ಣ ಅರಿವಿದೆ. ಯಾವ ಯಾವ ಭಾಗದಲ್ಲಿ ಡ್ರೋನ್ ಹಾರಿಸಿದರೆ ಮಹಿಳೆಯರ ವಿಡಿಯೋ ಅಥವಾ ಫೋಟೋ ತೆಗೆಯಬಹುದು ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎನ್ನಲಾಗಿದೆ.

ಹೊನ್ನಾವರ: ಅಪ್ಸರಕೊಂಡ ಉತ್ತರಕನ್ನಡ ಜಿಲ್ಲೆಯ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲೊಂದು. ಪ್ರಕೃತಿ ಮತ್ತು ಕಡಲತೀರದ ಸೌಂದರ್ಯ ಇಲ್ಲಿ ಸಮ್ಮಿಲನಗೊಂಡಿದೆ. ಹೀಗಾಗಿ ಈ ಪ್ರದೇಶದ ಸೌಂದರ್ಯ ಸವಿಯಲು ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.

ಹೀಗೆ ಆಗಮಿಸುವ ಪ್ರವಾಸಿಗರು ಪ್ರೀವೆಡ್ಡಿಂಗ್ ಶೂಟ್ ನೆಪದಲ್ಲಿ ಊರ ಮಧ್ಯೆ ಡ್ರೋನ್ ಹಾರಿಬಿಡುತ್ತಿದ್ದಾರೆ. ಇಲ್ಲಿಗೆ ಡ್ರೋನ್ ಹಿಡಿದು ಆಗಮಿಸುವ ಕೆಲ ಪ್ರವಾಸಿಗರಿಗೆ ಈ ಭಾಗದ ಪರಿಚಯ ಚೆನ್ನಾಗಿ ತಿಳಿದಂತಿದೆ. ಅಪ್ಸರಕೊಂಡ ಸುತ್ತಲಿನ ಕಡಲತೀರಕ್ಕೆ ಹೊಂದಿಕೊoಡಿರುವ ಹಲವು ಮನೆಗಳ ಶೌಚಾಲಯ ಹಾಗೂ ಸ್ನಾನಗೃಹಗಳಿಗೆ ಮೇಲ್ಛಾವಣಿ ಇಲ್ಲ.

ತೆಂಗಿನಗರಿಯಿoದ ಸುತ್ತಲೂ ತಡೆ ನಿರ್ಮಿಸಿಕೊಂಡು ಮಹಿಳೆಯರು ಹಾಗೂ ಪುರುಷರು ಸ್ನಾನ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪ್ರವಾಸಿಗರು ಪ್ರೀ ವೆಡ್ಡಿಂಗ್ ಶೂಟಿಂಗ್ ನೆಪದಲ್ಲಿ ಡ್ರೋನ್ ಹಾರಿಸಿ ಮಹಿಳೆಯರು ಹಾಗೂ ಯುವತಿಯರು ಸ್ನಾನ ಮಾಡುವ ಫೋಟೋಗಳನ್ನು ತೆಗೆಯುತ್ತಿರುವ ಘಟನೆ ತಾಲೂಕಿನ ಅಪ್ಸರಕೊಂಡ ಸುತ್ತಮುತ್ತ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ನಮ್ಮ ಈ ಭಾಗದಲ್ಲಿ , ಪ್ರವಾಸಿಗರು ಡ್ರೋನ್ ಹಾರಿಸಿ ಫೋಟೋಗ್ರಾಫಿ ಮಾಡುವುದನ್ನು ತಕ್ಷಣ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಇತ್ತಿಚಿಗೆ ಪ್ರವಾಸಿಗರು ಮತ್ತು ಸ್ಥಳೀಯರ ಮಧ್ಯೆ ಪಾರ್ಕಿಂಗ್ ವಿಷಯಕ್ಕೆ ಗಲಾಟೆ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಸೇರುತ್ತಲೇ ಅಲ್ಲಿಂದ ಕಾಲ್ಕಿತ್ತಿದ್ದರು ಎನ್ನಲಾಗಿದೆ.

ಘಟನೆಯ ನಂತರ ಸ್ಥಳೀಯರು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು , ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಸಭೆ ಆಯೋಜನೆ ಮಾಡಿ ತಮಗೆ ಆಹ್ವಾನಿಸುತ್ತೇವೆ. ತಮ್ಮ ಸಮಸ್ಯೆಗಳನ್ನು ತಿಳಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದ್ದಾರೆ.

ಒಟ್ನಲ್ಲಿ ಪರ ಊರಿನಿಂದ ಆಗಮಿಸುವ ಕೆಲ ಪ್ರವಾಸಿಗರು ಡ್ರೋನ್ ಶೂಟಿಂಗ್ ನೆಪದಲ್ಲಿ ಇಲ್ಲ ಸಲ್ಲದ ಚಟುವಟಿಕೆ ಮಾಡುತ್ತಿದ್ದಾರೆ. ಅಪ್ಸರಕೊಂಡದಲ್ಲಿ ಅಕ್ರಮವಾಗಿ ಊರಿನ ಮಧ್ಯ ಡ್ರೋನ್ ಹಾರಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆಯರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button