ಎರಡು ತಲೆ ಹೋಲುವ ವಿಚಿತ್ರ ಮಗು ಜನನ: ಮಗು ಸದ್ಯ ಜೀವಂತವಾಗಿದ್ದರೂ ಬದುಕುವ ಲಕ್ಷಣ ಕ್ಷೀಣ ಎಂದ ವೈದ್ಯರು
ಭಟ್ಕಳ: ತಾಲೂಕಿನ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಲೆಯನ್ನು ಹೋಲುವ ವಿಚಿತ್ರವಾದ ಮಗುವೊಂದು ಜನನವಾಗಿದ್ದು, ಮಗುವಿನ ತಾಯಿ ಸುರಕ್ಷಿತವಾದ್ದು, ಸದ್ಯ ಮಗು ಜೀವಂತವಾಗಿದೆ.
ಮಹಿಳೆ ಹೊಟ್ಟೆ ನೋವಿನಿಂದ ಭಟ್ಕಳ ಸರ್ಕಾರಿ ಆ ಸ್ಪತ್ರೆಗೆ ದಾಖಲಾಗಿದ್ದರು. ಭಟ್ಕಳದಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಮಗು 2 ತಲೆ ಹೋಲುವದನ್ನು ಕಂಡು ವೈದ್ಯರು ದಂಗಾಗಿದ್ದಾರೆ.2 ತಲೆಯನ್ನು ಹೋಲುವ ಮಗುವು ಸದ್ಯ ಜೀವಂತವಾಗಿದ್ದರೂ ಬದುಕುವ ಲಕ್ಷಣ ಕ್ಷೀಣ ಎಂದು ವೈದ್ಯಾಧಿಕಾರಿ ಡಾ ಸವಿತಾ ಕಾಮತ ತಿಳಿಸಿದ್ದಾರೆ. ಅಂಕೋಲಾದ ಹೊನ್ನಿಕೇರಿ ಮೂಲದ ದಂಪತಿಗಳಿಗೆ ಈ ವಿಚಿತ್ರ ಮಗು ಜನನವಾಗಿದೆ.
ಗರ್ಬಿಣಿ ಮಹಿಳೆ ಮಣಿಪಾಲ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಯೂ ವೈದ್ಯರು ಮಗು ಬದುಕುವ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಇಲ್ಲಿ ಚಿಕಿತ್ಸೆ ವೆಚ್ಚವೂ ಹೆಚ್ಚಾಗಬಹುದು ಎಂದಿದ್ದಾರೆ. ಹೀಗಾಗಿ ಮಹಿಳೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಟ್ಕಳದ ಹೆರಿಗೆ ತಜ್ಞೆ ಡಾ. ಶಂಸನೂರು ಕಷ್ಟಕರವಾದ ಈ ಪ್ರಕರಣವನ್ನು ತನ್ನೆಲ್ಲಾ ಅನುಭವದಿಂದ ನಾರ್ಮಲ್ ಹೆರಿಗೆ ಆಗುವ ಹಾಗೆ ಮಾಡಿದ್ದಾರೆ. ತಾಯಿ ಸುರಕ್ಷಿತವಾಗಿದ್ದಾರೆ.
ಇದು ಅಪರೂಪದ ಕಾಯಿಲೆಗಳಲ್ಲಿ ಅಪರೂಪದ ಕಾಯಿಲೆಯಾಗಿದೆ. 10 ಸಾವಿರ ಶಿಶುಗಳಲ್ಲಿ ಒಬ್ಬರಿಗೆ ಬರುವ ಸಂಭವವಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಎನ್ಸ್ ಹಲೋಸ್ ಎನ್ನುತ್ತಾರೆ. ಮಗು ನೋಡಲು ಎರಡು ತಲೆ ಹೋಲುವಂತಿರುತ್ತದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537