Follow Us On

WhatsApp Group
Important
Trending

ಸ್ಮಶಾನದ ಬಳಿ ಪರವಾನಗಿ ಇಲ್ಲದೇ ಗೋವಾ ಮದ್ಯ ಮಾರಾಟ: ಆರೋಪಿ ಬಂಧನ:

ಅಂಕೋಲಾ: ತಾಲೂಕಿನ ಬಹುತೇಕ ಕಡೆ ಅಕ್ರಮ ಸಾರಾಯಿ ಮಾರಾಟ ಜೋರಾಗಿ ನಡೆಯುತ್ತಿದ್ದು,ಸಂಬಂಧಿಸಿದ ಕೆಲ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ.

ಈ ನಡುವೆ ಕಾರವಾರ ವಿಭಾಗಕ್ಕೆ ನೂತನ ಡಿವೈಎಸ್ಪಿ ಆಗಿ ಅಧಿಕಾರ ಸ್ವೀಕರಿಸಿರುವ ವೆಲೆಂಟೆನ್ ಡಿಸೋಜ ಮಾರ್ಗದರ್ಶನದಲ್ಲಿ,ಅಂಕೋಲಾ ಸಿಪಿಐ ಸಂತೋಷ್ ಶೆಟ್ಟಿ ಸೂಚನೆ ಮೇರೆಗೆ,ಪಿಎಸ್ಐ ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ,ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಾಲು ಸಮೇತ ಬಂದಿಸಿದ ಘಟನೆ ಮಂಗಳವಾರ ರಾತ್ರಿಯ ವೇಳೆ ಕೇಣಿ – ಮೂಲೆಭಾಗ ವ್ಯಾಪ್ತಿಯಲ್ಲಿ ನಡೆದಿದೆ.

ಕೇಣಿ ಮೂಲೆಭಾಗ ನಿವಾಸಿ ರವಿಕಾಂತ ಮಾದೇವ ಹರಿಕಂತ್ರ (40) ಬಂಧಿತ ಆರೋಪಿಯಾಗಿದ್ದು, ಈತನು ಹತ್ತಿರದ ಸ್ಮಶಾನದ ಬಳಿ ಪರವಾನಗಿ ಇಲ್ಲದೇ ಗೋವಾ ರಾಜ್ಯದ ಲೇಬಲ್ ಹೊಂದಿದ ಲೈಟ್ ಹೌಸ್ ವಿಸ್ಕಿ ಎಂಬ ಹೆಸರಿರುವ 180 ಎಂ.ಎಲ್ ನ 110 ಸರಾಯಿ ಬಾಟಲಿಗಳನ್ನು, ಅಕ್ರಮ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ
ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ನೇತ್ರತ್ವದ ತಂಡ ಆರೋಪಿಯನ್ನು ಬಂಧಿಸಿ, ಅಕ್ರಮ ಗೋವಾ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಬ್ಬಂದಿ ಮಂಜುನಾಥ ಲಕ್ಮಾಪುರ, ಚಾಲಕ ಜಗದೀಶ ನಾಯ್ಕ, ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಸಿ ಎಚ್ ಸಿ. .ವೆಂಕಟ್ರಮಣ ಓಮು ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆಯ ಯಶಸ್ವೀ ಕಾರ್ಯಾಚರಣೆಗೆ ಬಡಗೇರಿ ಹಾಗೂ ಸುತ್ತಮುತ್ತಲ ಅನೇಕ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,

ಸಮುದ್ರ ತೀರದಂಚಿನಲ್ಲಿ ಹೆಚ್ಚಾಗಿ ನಡೆಯುವ ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕಾದಸಂಬಧಿಸಿದ ಇತರೆ ಇಲಾಖೆಗಳಾದ ಕರಾವಳಿ ಕಾವಲು ಪಡೆ ಮತ್ತು ಅಬಕಾರಿ ಇಲಾಖೆ ಈಗಲಾದರೂ ಎಚ್ಚೆತ್ತು ತಮ್ಮ ಕರ್ತವ್ಯ – ಜವಾಬ್ದಾರಿ ನಿಭಾಯಿಸುವಂತಾಗಲಿ ಎನ್ನುವುದು ಸ್ಥಳೀಯರ ಆಪೇಕ್ಷೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button