Important
Trending

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು : ಅಪಾಯದಿಂದ ಪಾರಾದ ಬ್ಯಾಂಕ್ ಉದ್ಯೋಗಿ ಮತ್ತು ಕುಟುಂಬಸ್ಥರು: ಕಂಬ ಕಿತ್ತು ಬೀಳಲು ಐ ಆರ್ ಬಿ ಕಳಪೆ ಕಾಮಗಾರಿಯೂ ಕಾರಣ ?

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು  ಚತುಷ್ಪಥ ರಸ್ತೆಯ ಮಧ್ಯದ ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರೂ ಅಪಾಯದಿಂದ ಪಾರಾಗಿದ್ದಾರೆ.  ಅಂಕೋಲಾ ತಾಲೂಕಿನ ಹಿಚ್ಕಡ ಕ್ರಾಸಿನಿಂದ ಸುಮಾರು 50 ಮೀ ದೂರದಲ್ಲಿ   ಬೆಳಸೆ ಮಾರ್ಗವಾಗಿ ಸಾಗುವ ರಾ.ಹೆ 66 ರಲ್ಲಿ ಶನಿವಾರ ಮದ್ಯಾಹ್ನ ಈ ರಸ್ತೆ ಅಪಘಾತ ಸಂಭವಿಸಿದೆ.

ಕಾರವಾರದ ಕೈಗಾ ಟೌನಶಿಪ್ ನ ಸ್ಟೇಟ್ ಬ್ಯಾಂಕ್ ಉದ್ಯೋಗಿ  ಭಟ್ಕಳ ಮೂಲದ  ನಂದೀಶಕುಮಾರ.ಜಿ,  ತಿಂಗಳ 2ನೇ ಶನಿವಾರದ ರಜೆ, ಹಾಗೂ ಮಾರನೇ ದಿನ ಭಾನುವಾರದ ರಜೆ ಇರುವ ಕಾರಣಕ್ಕೆ ಇಲ್ಲವೇ ಇನ್ನಿತರೆ ಕಾರಣಗಳಿಂದ ತಮ್ಮ ಕುಟುಂಬ ಸಮೇತ  ಕಾರವಾರದಿಂದ ತಮ್ಮ ಊರು ಭಟ್ಕಳಕ್ಕೆ ಕಾರಿನಲ್ಲಿ ( KA 47 – M 3871)ತೆರಳುತ್ತಿರುವ ಸಂದರ್ಭದಲ್ಲಿ, ಅಂಕೋಲಾ – ಕುಮಟಾ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.

ನಂದೀಶ ಕುಮಾರ ಕಾರ್ ಚಲಾಲಿಸುತ್ತಿದ್ದ ವೇಳೆ ರಸ್ತೆಯಲ್ಲಿ ಏನೋ ಅಡ್ಡ ಬಂದತಾಗಿ  ಕಾರಿನ ಬ್ರೇಕ್ ಒತ್ತುವಷ್ಟರಲ್ಲಿ,ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯ ಡಿವೈಡರ್ ಅಂಚಿನಲ್ಲಿ ಅಳವಡಿಸಿದ ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು  ಪಲ್ಟಿಯಾಯಿತು ಎನ್ನಲಾಗಿದ್ದು, ಅಪಘಾತದ ಪರಿಣಾಮ ಕಾರ ನುಜ್ಜುಗುಜ್ಜಾಗಿದೆ.

ಇದೇ ವೇಳೆ ವಿದ್ಯುತ್ ದೀಪ ಅಳವಡಿಸಿರ ಎತ್ತರದ ಕಂಬವು  ಬುಡ ಸಮೇತ ಕಿತ್ತು ಬಿದ್ದಿದೆ. ಕಂಬ ಬೀಳಲು ಕಾರಿನ ಡಿಕ್ಕಿ  ರಭಸಕ್ಕಿಂತ,  ಕಂಬವನ್ನು   ಸರಿಯಾದ ಕಾಂಕ್ರೀಟಿಕರಣ ಮಾಡದೇ  ನೆಲಮಟ್ಟಕ್ಕಿಂತ ಮೇಲೆ ಕಳಪೆ ಕಾಮಗಾರಿ ಮಾಡಿ  ನಿಲ್ಲಿಸಿರುವುದೇ ಮುಖ್ಯ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.   

ನಂದೀಶ ಕುಮಾರ, ಪತ್ನಿ ಭಾಗ್ಯಶ್ರೀ, 3 ಹಾಗೂ 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಪುಟಾಣಿ ಮಕ್ಕಳಿಗೂ ಚಿಕ್ಕ ಪುಟ್ಟ ಗಾಯಗಳಾಗಿದೆ.ಅಪಘಾತದ ಸ್ಥಳ ಮತ್ತು ಕಾರ್ ಪಲ್ಟಿಯಾಗಿರುವುದು, ವಿದ್ಯುತ್ ಕಂಬ ಕಿತ್ತು ಬಿದ್ದಿರುವುದನ್ನು ನೋಡಿದರೆ ಕಾರಿನಲ್ಲಿದ್ದವರೆರೂ ಅದೃಷ್ಟ ಬಲದಿಂದಲೇ ಸುರಕ್ಷಿತವಾಗಿ ಇದ್ದರೆ ಎನ್ನುವಂತಾಗಿದೆ.

ಇದೇ ವೇಳೆ ಇತರೆ ಯಾವುದೇ ವಾಹನಗಳು ಒಮ್ಮೇಲೆ ಬರದಿರುವುದು ಸಂಭವನೀಯ ಬಾರಿ ಅನಾಹುತ ತಪ್ಪಿಸಿದಂತಿದೆ. ಗಾಯಾಳುಗಳನ್ನು ಪಟ್ಟಣದ ಡಾ. ಕಮಲಾ ಮತ್ತು ಆರ್. ಎನ್. ನಾಯಕ ಹಾಸ್ಪಿಟಲಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ತದನಂತರ ಹೆಚ್ಚಿನ ತಪಾಸಣೆಗಾಗಿ ಭಟ್ಕಳ ಪಕ್ಕದ ಕುಂದಾಪುರದ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. ಅಪಘಾತ ನಡೆದ ಸ್ಥಳದಿಂದ, ಅಂಕೋಲಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲು ಸಾಮಾಜಿಕ ಕಾರ್ಯಕರ್ತ ಗೋಪು ನಾಯಕ್ ಅಡ್ಲೂರು ಮತ್ತಿತರರು ನೆರವಾದರು.

ತುಸು ಹೊತ್ತಿನ ಬಳಿಕ ಬಂದ 112 ಇ ಆರ್ ಎಸ್ ಎಸ್ ವಾಹನದ ಸಿಬ್ಬಂದಿಗಳು, ಐ ಅರ್ ಬಿ ಸಿಬ್ಬಂದಿಗಳು, ಮಿನಿ ಕ್ರೇನ್ ಮಾಲಕ ರೋಹನ್, ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ರೇವಣಕರ ಮತ್ತಿತರರು ಪಲ್ಟಿಯಾದ ಕಾರನ್ನು ಎತ್ತಿ, ಸರಿದಾರಿಯಲ್ಲಿ ಸಾಗಿಸಿ,ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಲಕ್ಷ್ಮೀ ನರಸಿಂಹ, ರೂಫಿಂಗ್ ಪ್ರೊಡಕ್ಟ್ಸ್ : ರೂಫಿಂಗ್ ಪ್ರೊಡಕ್ಟ್ಸ್ ಗಳು ಕರಾವಳಿಯಲ್ಲಿ ಪ್ರಪ್ರಥಮಬಾರಿಗೆ ಇದೀಗ ಕುಮಟಾದಲ್ಲಿ ಆರಂಭಗೊಂಡಿದ್ದು,, ಗ್ರಾಹಕರ ಅವಶ್ಯಕತೆಗನುಗುಣವಾಗಿ ಬೇಕಾದ ಅಳೆತೆಯ ಬಣ್ಣಬಣ್ಣದ ಮೇಲ್ಚಾವಣಿ ತಯಾರಿಸಿಕೊಡಲಾಗುವುದು. ನಮ್ಮಲ್ಲಿ ಎಲ್ಲಾ ತರಹದ ಕಲರ್ ರೂಫಿಂಗ್ ಶೀಟ್ಸ್, ಕ್ರಿಂಪಿoಗ್ ಶೀಟ್ಸ್, ರಿಡ್ಜಸ್, ಚಾನಲ್ಸ್ ಮತ್ತು ಫ್ರೀ ಎಂಜಿನಿಯರಿoಗ್ ವರ್ಕ್ಸ್ ಮಾಡಿಕೊಡಲಾಗುವುದು. ಆಧುನಿಕ ತಂತ್ರಜ್ಞಾನದ ಮಷಿನ್‌ಗಳನ್ನು ಬಳಸಿಕೊಂಡು, ಬೇಡಿಕೆಗೆ ಅನುಗುಣವಾಗಿ ಇಲ್ಲಿಯೇ ಶೀಟ್ಸ್ ಗಳನ್ನು ಮಾಡಿಕೊಡಲಾಗುತ್ತದೆ. ನಿಮ್ಮ ಮನೆಯ ಅಂದ ಹೆಚ್ಚಿಸುವ ಅತ್ಯುತ್ತಮ ಗುಣಮಟ್ಟದ ಕೆಲಸಗಳಿಗಾಗಿ ನಮ್ಮನ್ನು ಸಂಪರ್ಕಿಸಿ.. ಜಿಂದಾಲ್, jsw, ಎಎಮ್&ಎನ್‌ಎಸ್, ಟಾಟಾ ಸೇರಿ ಎಲ್ಲಾ ಎಲ್ಲಾ ಬ್ರ್ಯಾಂಡಿನ ಶೀಟ್‌ಗಳು ನಮ್ಮಲ್ಲಿ ಲಭ್ಯಪ್ಲಾಟ್ ನಂಬರ್ 21, ಇಂಡಸ್ಟ್ರೀಯಲ್ ಎಸ್ಟೇಟ್, ಎಸ್ಟೇಟ್, ಹೆಗಡೆ ರಸ್ತೆ, ಕುಮಟಾ: 9481871454, 7338328454

Back to top button