Important
Trending

ಮನೆಯ ಬಾಗಿಲು ಮುರಿದು ಕಳ್ಳತನ: ಕೆಲವೇ ಗಂಟೆಯಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು

ಭಟ್ಕಳ : ತಾಲೂಕಿನ ರಂಗಿನಕಟ್ಟೆ ರೈಸ್ ಮಿಲ್ ಹಿಂಬಾಗದ ಸಲ್ಮಾನ ಬಾದನಲ್ಲಿನ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳತನವಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಬಂಧಿತ ಆರೋಪಿ ಕೆ.ಪಿ ಮುಸ್ತಾಪ (40) ಚೌಥನಿ ಮೆನ್ ರೋಡ್ ನಿವಾಸಿ ಎಂದು ತಿಳಿದು ಬಂದಿದೆ.

ಈತ ರಾತ್ರಿ ಸಮನ್ರಿ ಫಜಲೂರ್ ರೆಹಮಾನ್ ಎನ್ನುವವರ ಮನೆಯ ಬಾಗಿಲನ್ನು ಮುರಿದು ಮನೆಯಲ್ಲಿರುವ ಕಪಾಟಿನ ಬಾಗಿಲನ್ನು ತೆರೆದು ಬಂಗಾರದ 2 ಉಂಗುರು, ಬ್ರಾಸಲೇಟ್ 1, ಕಿವಿ ಒಲೆ ಸೇರಿ ಸುಮಾರು 47 ಗ್ರಾಂ ತೂಕದ 1,45,000 ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರರಿಯಾಗಿದ್ದನು. ಈ ಕುರಿತು ಮನೆಯ ಮಾಲೀಕರು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಳ್ಳತದ ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳನ ಜಾಡು ಬೆನ್ನಟ್ಟಿ ಒಂದೇ ದಿನದಲ್ಲಿ ಕಳ್ಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಟ್ಕಳ ವೃತ್ತ ನಿರೀಕ್ಷಕರಾದ ದಿವಾಕರ ಪಿ.ಎಮ್. ಭಟ್ಕಳ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ ಸುಮ ಬಿ, ಮತ್ತು ಹೆಚ್.ಬಿ. ಕುಡಗುಂಟಿ ಹಾಗೂ ಯಲ್ಲಪ್ಪ ಮಾದರ ಸಿಬ್ಬಂದಿಗಳಾದ ಎ. ಎಸ್.ಐ ಗೋಪಾಲ ನಾಯ್ಕ ಮಹಿಳಾ ಎ.ಎಸ್.ಐ ದೀಪಾ ನಾಯಕ, ದಿನೇಶ ನಾಯಕ, ಮದಾರಸಾಬ್ ಚಿಕ್ಕೇರಿ, ಈರಣ್ಣಾ, ಲೋಕಪ್ಪ ಕತ್ತಿ, ಸಿದ್ದಪ್ಪ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಶ್ರೀ ಲಕ್ಷ್ಮೀ ನರಸಿಂಹ, ರೂಫಿಂಗ್ ಪ್ರೊಡಕ್ಟ್ಸ್ :

ರೂಫಿಂಗ್ ಪ್ರೊಡಕ್ಟ್ಸ್ ಗಳು ಕರಾವಳಿಯಲ್ಲಿ ಪ್ರಪ್ರಥಮಬಾರಿಗೆ ಇದೀಗ ಕುಮಟಾದಲ್ಲಿ ಆರಂಭಗೊಂಡಿದ್ದು,, ಗ್ರಾಹಕರ ಅವಶ್ಯಕತೆಗನುಗುಣವಾಗಿ ಬೇಕಾದ ಅಳೆತೆಯ ಬಣ್ಣಬಣ್ಣದ ಮೇಲ್ಚಾವಣಿ ತಯಾರಿಸಿಕೊಡಲಾಗುವುದು. ನಮ್ಮಲ್ಲಿ ಎಲ್ಲಾ ತರಹದ ಕಲರ್ ರೂಫಿಂಗ್ ಶೀಟ್ಸ್, ಕ್ರಿಂಪಿoಗ್ ಶೀಟ್ಸ್, ರಿಡ್ಜಸ್, ಚಾನಲ್ಸ್ ಮತ್ತು ಫ್ರೀ ಎಂಜಿನಿಯರಿoಗ್ ವರ್ಕ್ಸ್ ಮಾಡಿಕೊಡಲಾಗುವುದು. ಆಧುನಿಕ ತಂತ್ರಜ್ಞಾನದ ಮಷಿನ್‌ಗಳನ್ನು ಬಳಸಿಕೊಂಡು, ಬೇಡಿಕೆಗೆ ಅನುಗುಣವಾಗಿ ಇಲ್ಲಿಯೇ ಶೀಟ್ಸ್ ಗಳನ್ನು ಮಾಡಿಕೊಡಲಾಗುತ್ತದೆ. ನಿಮ್ಮ ಮನೆಯ ಅಂದ ಹೆಚ್ಚಿಸುವ ಅತ್ಯುತ್ತಮ ಗುಣಮಟ್ಟದ ಕೆಲಸಗಳಿಗಾಗಿ ನಮ್ಮನ್ನು ಸಂಪರ್ಕಿಸಿ.. ಜಿಂದಾಲ್, jsw, ಎಎಮ್&ಎನ್‌ಎಸ್, ಟಾಟಾ ಸೇರಿ ಎಲ್ಲಾ ಎಲ್ಲಾ ಬ್ರ್ಯಾಂಡಿನ ಶೀಟ್‌ಗಳು ನಮ್ಮಲ್ಲಿ ಲಭ್ಯ. ಪ್ಲಾಟ್ ನಂಬರ್ 21, ಇಂಡಸ್ಟ್ರೀಯಲ್ ಎಸ್ಟೇಟ್, ಎಸ್ಟೇಟ್, ಹೆಗಡೆ ರಸ್ತೆ, ಕುಮಟಾ: 9481871454, 7338328454

Back to top button