Focus News
Trending

ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ : ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಸಿದ್ದಾಪುರ ಪಟ್ಟಣದಲ್ಲಿ ಯುವಕರು ಗಳ ನಡುವೆ ಗಲಾಟೆ ನಡೆದು ಹಲ್ಲೆಯಾಗಿ ಹಲ್ಲೆ ಮತ್ತು ದರೋಡೆ ಹಾಗೂ ಜೀವಬೆದರಿಕೆ ಘಟನೆಗೆ ಸಂಬoಧಿಸಿoತೆ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ.

ನವೆಂಬರ್ 13ರಂದು ಅನಿಲ್ ದುರ್ಗಪ್ಪ ಭೋವಿ ವಡ್ಡರ್ ಅಂಬೇಡ್ಕರ್ ಕಾಲೋನಿ ರವೀಂದ್ರ ನಗರ ಸಿದ್ದಾಪುರ ಹಾಗೂ ಈತನ ಸ್ನೇಹಿತನಾದ ಜೋಸೆಫ್ ಡಿಕೋಸ್ಟಾ ರವೀಂದ್ರ ನಗರ ಸಿದ್ದಾಪುರ ಇವರು ಪಟ್ಟಣಕ್ಕೆ ಬಂದು ತಿಂಡಿ ತಿಂದು ವಾಪಸ್ ಮನೆಗೆ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಹಿಂದಿನಿoದ ನ್ಯಾನೋ ಕಾರಿನಲ್ಲಿ ಬಂದವರು ಬ್ಯಾಂಕ್ ಆಫ್ ಬರೋಡಾದ ಹತ್ತಿರ ತಮ್ಮ ಕಾರಿಗೆ ಪ್ರಶಾಂತ್ ನಾಯ್ಕ್ ಹೊಸೂರ್, ದೇವೇಂದ್ರ ನಾಯ್ಕ್ ಹೊಸೂರ್, ಹರೀಶ್ ಗೌಡರ್ ಹರಳಿಕೊಪ್ಪ, ಇವರು ಅಡ್ಡ ಹಾಕಿ ಅವಾಚ್ಯ ಶಬ್ದದಿಂದ ಬೈದು ಜೋಸೆಫ್ ನನ್ನು ದೂಡಿ ಹಾಕಿದ್ದಾರೆ. ಅಲ್ಲದೆ ತನ್ನನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿ ಕೈಯಿಂದ ಬೆನ್ನ ಮೇಲೆ ಗುದ್ಧಿ ಹಲ್ಲೆ ನಡೆಸಿ ಜಾತಿನಿಂದನೆ ಮಾಡಲಾಗಿದೆ ಎಂದು ನಾಲ್ವರ ಮೇಲೆ ಅನಿಲ್ ವಡ್ಡರ್ ದೂರು ನೀಡಿದ್ದಾರೆ.

ಘಟನೆಗೆ ಸಂಬoಧಪಟ್ಟoತೆ ಹರೀಶ್ ಗೌಡರ್ ಹರಳಿಕೊಪ್ಪ ಪ್ರತಿ ದೂರನ್ನು ನೀಡಿದ್ದು ತಾನು ತನ್ನ ಸ್ನೇಹಿತರಾದ ದೇವೇಂದ್ರ ಮತ್ತು ಪ್ರಶಾಂತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಟ್ಟಣದ ಬ್ಯಾಂಕ್ ಆಫ್ ಬರೋಡ ಎದುರು ತಮ್ಮ ಕಾರನ್ನು ಅನಿಲ್ ವಡ್ಡರ ಹಾಗೂ ಜೋಸೆಫ್ ಅಡ್ಡಹಾಕಿ ನನ್ನ ಕೊರಳಿನಲ್ಲಿದ್ದ ಚಿನ್ನದ ಚೈನ್ ಕಿತ್ತು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಪ್ರತೀ ದೂರು ನೀಡಿದ್ದಾರೆ ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಘಟನೆ ಗೆ ಸಂಬoಧಿಸಿದoತೆ ಭಾನುವಾರ ನಾಲ್ವರನ್ನು ಪೊಲೀಸರು ವಿಚಾರಣೆ ಗೆ ಕರೆ ತಂದು ಬಹಳ ಸಮಯ ಕಳೆದರು ವಾಪಾಸ್ ಕಳುಹಿಸದೆ ಇರುವುದರಿಂದಸುಳ್ಳು ಪ್ರಕರಣ ದಾಖಳಿಸುತ್ತಾರೆ ಎಂದು ತಾಲೂಕಿನ ಜನತೆ ರಾತ್ರಿ ಠಾಣೆಯ ಎದುರು ನೆರೆದಿದ್ದು , ಪೊಲೀಸರಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುರಿಯುವ ಮಳೆಯಲ್ಲೂ ತಡ ರಾತ್ರಿ 1 ಗಂಟೆವರೆಗೂ ಠಾಣೆಯ ಎದುರು ನಿಂತಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button