Follow Us On

WhatsApp Group
Important
Trending

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಬಸ್ ನಲ್ಲೇ ಸಾವು: ಟಿಕೆಟ್ ಮಾಡಲು ಹೋದಾಗ ಬೆಳಕಿಗೆ

ಗೋಕರ್ಣ: ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಬಸ್ ನಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬಸ್ ನಿಲ್ದಾಣದಲ್ಲಿ ನಡೆದಿದೆ. ನಿರ್ವಾಹಕ ಹಾಗೂ ಪ್ರಯಾಣಿಕರು ಬಸ್ ನಲ್ಲಿ ಕುಳಿತಿದ್ದವರನ್ನು ಮಾತನಾಡಿಸಿದರೂ ಮಾತನಾಡದೇ ಇದ್ದಾಗ, ಗೊಂದಲಗೊoಡ ಜನರು ಅವರನ್ನು ನೋಡಿದಾಗ ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.

ಗೋಕರ್ಣ ನಿಲ್ದಾಣದಿಂದ ಕುಮಟಾಕ್ಕೆ ತೆರಳವ ಬಸ್ ನಿಂತಿತ್ತು. ಈ ವೇಳೆ ನಿರ್ವಾಹಕ ಬಸ್ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಲು ಬಂದಾಗ ಮಾತನಾಡಲಿಲ್ಲ. ಕೂಡಲೇ ನಿಲ್ದಾಣದ ನಿಯಂತ್ರಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಹೆಸ್ಕಾಂ ಯೂನಿಫಾರ್ಮ್ ಧರಿಸಿದ್ದು, ಮೃತ ವ್ಯಕ್ತಿ ಶಿರಸಿಯವನೆಂದು ತಿಳಿದು ಬಂದಿದೆ. ವ್ಯಕ್ತಿಯ ಜೇಬಿನಲ್ಲಿ ಅಂಕೋಲಾ ದಿಂದ ಕುಮಟಾಕ್ಕೆ ಬಂದ ಟಿಕೆಟ್ ದೊರೆತಿದ್ದು, ಗೋಕರ್ಣಕ್ಕೆ ಬಂದಿದ್ದವರು ಎನ್ನುವ ಮಾಹಿತಿ ಲಭಿಸಿದೆ.

ವಿಸ್ಮಯ ನ್ಯೂಸ್, ಗೋಕರ್ಣ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button