Follow Us On

WhatsApp Group
Important
Trending

ಭಾರೀ ಮಳೆ: ಸಂಪೂರ್ಣವಾಗಿ ಕುಸಿದು ರಸ್ತೆ ಸಂಪರ್ಕ ಕಡಿತ: ನಿದ್ರೆ ಮಾಡುತ್ತಿದ್ದವರ ಮೇಲೆ ಕುಸಿದು ಬಿತ್ತು ಮನೆ

ಯಲ್ಲಾಪುರ: ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕುಸಿದು,‌ಸಂಪರ್ಕ ಕಡಿತಗೊಂಡ ಘಟನೆ ಉಮ್ಮಚ್ಗಿ ವ್ಯಾಪ್ತಿಯಲ್ಲಿ ನಡೆದಿದೆ.‌ ಇಲ್ಲಿನ ತುಡುಗುಣಿಯಿಂದ ಸೂರಿಮನೆಯನ್ನು ಸಂಪರ್ಕಿಸಬೇಕಾದ ರಸ್ತೆಯ ತುಡುಗುಣಿ ಸೇತುವೆ ಬಳಿಯಲ್ಲಿ ರಸ್ತೆ ಸಂಪೂರ್ಣ ಕುಸಿತವಾಗಿದೆ

ಹೀಗಾಗಿ ಸೂರಿಮನೆಗೆ ತಕ್ಷಣ ಸಂಪರ್ಕ ಸಾಧ್ಯವಾಗುವಂತೆ ಮಾಡಲು ಬದಲೀ ದಾರಿಯ ನಿರ್ಮಾಣಕ್ಕಾಗಿ ಪಂಚಾಯತದ ಸಹಕಾರದೊಂದಿಗೆ ಊರಿನವರ ಸಹಯೋಗದಲ್ಲಿ ಕಾರ್ಯ ಆರಂಭವಾಗಿದೆ.

ಇದೇ ವೇಳೆ, ಮಳೆಯಿಂದಾಗಿ ಉಮ್ಮಜ್ಗಿಯ ಬಾಳೆಗದ್ದೆಯಲ್ಲಿ ಅನಂತ ರಾಮಾಸಿದ್ದಿ ಎನ್ನುವವರ ಮನೆಯು ಸಂಪೂರ್ಣ ನೆಲಸಮವಾಗಿದೆ. ಬೆಳಗಿನಜಾವ ನಡೆದ ಈ ಘಟನೆಯಲ್ಲಿ ಅನಂತ ರಾಮಾಸಿದ್ದಿ ಅವರ ಕಾಲಿಗೆ ಪೆಟ್ಟಾಗಿದೆ. ಮಂಜುನಾಥ ಸಿದ್ದಿ ಎನ್ನುವವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯಲ್ಲಿ ಆರೇಳು ಜನ ವಾಸವಿದ್ದು, ಮನೆ
ಕುಸಿಯುತ್ತಿರುವ ಶಬ್ದ ಕೇಳಿ ಕೆಲವರು ಹೊರಗೋಡಿಬಂದರೆ, ಆದರೆ ಅನಂತ ಮತ್ತು ಮಂಜಾ ಸಿದ್ದಿ ಗಾಢನಿದ್ದೆಯಲ್ಲಿ
ಇದ್ದುದ್ದರಿಂದ ಶಬ್ದ ಕೇಳಿಲ್ಲ ಎನ್ನಲಾಗಿದ್ದು, ಅವರ ಮೇಲೆಯೇ ಮನೆ ಬಿದ್ದು ಗಾಯವಾಗಿದೆ. ಮನೆಯೊಳಗಿದ್ದ ಅಕ್ಕಿ, ಬೇಳೆ, ಪಾತ್ರೆಗಳಷ್ಟೇ ಅಲ್ಲದೆ, ಬಟ್ಟೆಬರೆಗಳೂ ಕೂಡ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Back to top button