Focus News
Trending

ಅಪರೂಪದ ಕಲಾ ಸಂಗಮ ಯಕ್ಷಗಾನ ನಾಟ್ಯ ತಾಳಮದ್ದಲೆ: ಕರ್ನಾಟಕ ಸಂಘದ ಆಶ್ರಯದಲ್ಲಿ ಆಯೋಜನೆ

ಅಂಕೋಲಾದ: ಕರ್ನಾಟಕ ಸಂಘದ ಆಶ್ರಯದಲ್ಲಿ ಪಟ್ಟಣದ ಸ್ವಾತಂತ್ರ‍್ಯ ಸಂಗ್ರಾಮ ಭವನದಲ್ಲಿ ಅಪರೂಪದ ಕಲಾ ಸಂಗಮ ಯಕ್ಷಗಾನ ನಾಟ್ಯ ತಾಳಮದ್ದಲೆ ಕಾರ್ಯಕ್ರಮ ನಡೆಯಿತು . ತಹಶೀಲ್ದಾರ ಉದಯ ಕುಂಬಾರ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಕರೊನ ಮಹಾಮಾರಿಯ ಕಾರಣದಿಂದ ಕಮರಿ ಹೋಗಿರುವ ಕಲಾ ಪ್ರಕಾರಕ್ಕೆ ಮತ್ತೆ ಜೀವಕಳೆ ತುಂಬುವ ಮಹತ್ವಾಕಾಂಕ್ಷೆಯೊoದಿಗೆ ಅಂಕೋಲಾ ಕರ್ನಾಟಕ ಸಂಘ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿತ್ತು. ಗಾನವೈಭವದಲ್ಲಿ ಸಾಲಿಗ್ರಾಮ ಮೇಳದ ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರ, ಹೊನ್ನಾವರ ಮಾಳ್ಕೋಡದ ಕು.ಚಿಂತನಾ ಹೆಗಡೆ ಸುಶ್ರಾವ್ಯ ಗಾಯನ, ಮದ್ದಳೆಯ ಮಾಂತ್ರಿಕ ಶಂಕರ ಭಾಗವತ ಮತ್ತು ಪ್ರಸನ್ನ ಹೆಗ್ಗಾರರ ಚಂಡೆ ವಾದನಕ್ಕೆ ಪ್ರೇಕ್ಷಕರನ್ನು ಗಂಟೆಗೂ ಹೆಚ್ಚು ಕಾಲ ಮಂತ್ರಮುಗ್ದರಾದರು.

ನಾಟ್ಯರಂಗದಲ್ಲಿ ಹನುಮಗಿರಿ ಮೇಳದ ರಕ್ಷಿತ ಶೆಟ್ಟಿ ಪಡ್ರೆ ಸ್ತ್ರೀವೇಷಧಾರಿಯಾಗಿ , ಮತ್ತು ಯಕ್ಷ ಅಭಿಜಾತೆ ಅಶ್ವಿನಿ ಕೊಂಡದಕುಳಿ ಪುರುಷ ಪಾತ್ರದಲ್ಲಿ ರಸದೌತಣ ನೀಡಿದರು. ಪ್ರೊ.ಕೆ.ವಿ.ನಾಯಕ ಮತ್ತು ರಾಜೇಶ ನಾಯಕ ತಾಳಮದ್ದಲೆ ಅರ್ಥಧಾರಿಗಳಾಗಿ ತಮ್ಮ ಜ್ಞಾನ – ಹಾಗೂ ಕಲಾ ಭಂಡಾರದ ಮೂಲಕ ಯಕ್ಷ ಪ್ರಿಯರ ಮನ ಗೆದ್ದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರಭಾಕರ ಬಂಟ ಸ್ವಾಗತಿಸಿದರು. ಸಂಘಟಕ ರಾಜೇಶ ನಾಯಕ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ವಿಠಲದಾಸ ಕಾಮತ, ಸಹಕಾರ್ಯದರ್ಶಿ ಪ್ರಕಾಶ ಕುಂಜಿ, ಇತರೆ ಪದಾಧಿಕಾರಿಗಳು ಸಹಕರಿಸಿದರು. ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಸ್ಥರದ ಗಣ್ಯರು,ಯಕ್ಷ ಪ್ರೇಮಿಗಳು,ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button