ಡಿಸೆಂಬರ್ 2 ರಿಂದ ‘ಕುಮಟಾ ರೋಟರಿ ಉತ್ಸವ’: ನಾಲ್ಕು ದಿನಗಳ ಕಾಲ ನಡೆಯಲಿದೆ ಬೃಹತ್ ಸಾಂಸ್ಕೃತಿಕ ಮೇಳ
ಕುಮಟಾ: ಇದೇ ಮೊದಲ ಬಾರಿಗೆ ಕುಮಟಾ ರೋಟರಿ ಕ್ಲಬ್ ಹಾಗೂ ರೋಟರಿ ಸರ್ವೀಸ್ ಸೊಸೈಟಿ ಜಂಟಿಯಾಗಿ ಆಹಾರ ಮತ್ತು ಸಾಂಸ್ಕೃತಿಕ ಮೇಳವನ್ನೊಳಗೊಂಡ ‘ಕುಮಟಾ ರೋಟರಿ ಉತ್ಸವ’ವನ್ನು ಆಯೋಜಿಸುತ್ತಿದೆ. ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಡಿ. 2 ರಿಂದ 5 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಪೂರ್ತಿ ಮನರಂಜನೆ, ಮೋಜು, ತಿಂಡಿ-ತಿನಿಸು ಗಳನ್ನೊಳಗೊಂಡoತೆ ವೈವಿಧ್ಯಮಯ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲಿದೆ.
ತಾಲ್ಲೂಕಿನಲ್ಲಿರುವ ಜಿಲ್ಲೆಯ ಜೀವನಾಡಿ ‘ಉತ್ತರ ಕನ್ನಡ ಬ್ಲಡ್ ಬ್ಯಾಂಕ್’ ಹಾಗೂ ಸಂಗೀತ-ನೃತ್ಯಪಾಠಶಾಲೆ ‘ನಾದಶ್ರೀ ಕಲಾಕೇಂದ್ರ’ದ ಉನ್ನತೀಕರಣಕ್ಕಾಗಿ ನಿಧಿ ಸಂಗ್ರಹಣೆಯ ಸದುದ್ದೇಶ ಹೊಂದಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪ್ರೋತ್ಸಾಹಿಸಬೇಕಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ನಮೃತಾ ಶಾನಭಾಗ ಮತ್ತು ಕಾರ್ಯದರ್ಶಿ ಶಿಲ್ಪಾ ಜಿನರಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537