ಕಾರವಾರ: ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಶ ಮಾಡುವುದರೊಂದಿಗೆ ಮಹಿಳೆಯೊಬ್ಬಳು ಹೊಸ ಪರಂಪರೆಗೆ ಮುನ್ನಡಿ ಬರೆದಿದ್ದಾಳೆ. ಈ ಘಟನೆ ನಡದಿರೋದು ಮುಡಗೇರಿಯಲ್ಲಿ.
ಹಿಂದೂ ಧರ್ಮದ ಪ್ರಕಾರ ತಂದೆ ಮರಣ ಹೊಂದಿದಾಗ ಗಂಡು ಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡುವುದು ಸಾಮಾನ್ಯವಾಗಿ ನಡೆದು ಬಂದ ಸಂಪ್ರದಾಯ. ಆದರೆ ಪ್ರತಿಭಾ ನಾಯ್ಕ,ಈ ಎಲ್ಲಾ ಸಂದ್ರದಾಯವನ್ನು ಮೀರಿ ಮಾದರಿಯಾಗಿದ್ದಾಳೆ.
ರಮೇಶ ನಾಯ್ಕ ಅವರಿಗೆ ಪ್ರತಿಭಾ ಏಕೈಕ ಪುತ್ರಿಯಾಗಿದ್ದು, ಹೀಗಾಗಿ ಮೃತಪಟ್ಟ ತಂದೆಯ ಚಿತೆಗೆ ಪುತ್ರಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದಾಳೆ.
ವಿಸ್ಮಯ ನ್ಯೂಸ್ ಕಾರವಾರ