Follow Us On

WhatsApp Group
Focus News
Trending

ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ಸನ್ಮಾನ: ಗಿಡ-ಮರಗಳನ್ನು ಬೆಳೆಸುವಂತೆ ಮನವಿ

ಕಾರವಾರ: ಲೆಕ್ಕಕ್ಕೆ ಸಿಗದಷ್ಟು ಗಿಡಗಳನ್ನು ಬೆಳೆಸಿದ್ದೇನೆ. ನೀವೂ ಗಿಡ-ಮರಗಳನ್ನು ಬೆಳೆಸಿ ಪರಿಸರವನ್ನು ಕಾಪಾಡಬೇಕು ಎಂದು ಪದ್ಮಶ್ರೀ ತುಳಸಿ ಗೌಡ ಹೇಳಿದರು. ನಗರದ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರಾಸಿಂ ಇಂಡಸ್ಟಿçÃಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಾಗುವಾನಿ, ಹಲಸು, ಮಾವು ಇನ್ನಿತರ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಕಾಳಜಿ ತೋರಬೇಕು ಎಂದು ಅವರು ತಿಳಿಸಿದರು.

ವಿಸ್ಮಯ ನ್ಯೂಸ್, ಕಾರವಾರ

Back to top button