Follow Us On

WhatsApp Group
Focus News
Trending

ದೇಶದಲ್ಲೇ ಮೊದಲು ರಾಜ್ಯದಲ್ಲಿ ಕಾಲಿರಿಸಿದ ಓಮಕ್ರಾನ್ ಮಾರಿ: ಅನಗತ್ಯ ಆತಂಕ ಬೇಡ: ಇರಲಿ ಮುನ್ನೆಚ್ಚರಿಕೆ

ಬೆಂಗಳೂರು: ಕರೋನಾ ಮಾರಿ ಇನ್ನೇನು ದೂರವಾಗುವ ಕಾಲ ಸನ್ನಿಹಿತ ಎಂದು ಹಲವರು ಸಂತಸ ಪಡುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾ ಆದಿಯಾಗಿ ವಿಶ್ವವನ್ನೇ ಮತ್ತೆ ಭಯಭೀತ ಗೊಳಿಸಿರುವ ಕರೋನಾ ಹೊಸ ರೂಪಾಂತರಿ ತಳಿ ಓಮಿಕ್ರಾನ್, ರಾಜ್ಯದಲ್ಲೂ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಜಮಿಕ್ರಾನ್‌ 2 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿರುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗ್ರವಾಲ್ ಅವರು ಮಾಹಿತಿ ನೀಡಿದ್ದು ಮಹಾಮಾರಿಯ ರೂಪಾಂತರಿ ರಾಜ್ಯದ ಮೂಲಕ ಭಾರತದ ಗಡಿ ಒಳಗೆ ಪ್ರವೇಶಿಸಿದಂತಾಗಿದೆ.

ಬೆಂಗಳೂರಿನಲ್ಲಿ 46 ಮತ್ತು 66 ವರ್ಷದ ವ್ಯಕ್ತಿಗಳಲ್ಲಿ ಸೋಂಕು ದೃಡ ಪಟ್ಟಿದ್ದು ಇವರು ಕಳೆದ ತಿಂಗಳು (ನವೆಂಬರ್) ನಲ್ಲಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ.

ಇವರಿಬ್ಬರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಲಾಗಿದೆ. ಈ ಕುರಿತು ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಓಮಿಕ್ರಾನ್ ವೇಗವಾಗಿ ಹರಡುತ್ತದೆ ಆದರೆ ಜೀವಕ್ಕೆ ಅಪಾಯ ಇಲ್ಲ ಎಂದಿದ್ದಾರೆ.

ದೇಶದಲ್ಲೇ ಮೊದಲು ಕರ್ನಾಟಕ ರಾಜ್ಯದಲ್ಲಿಯೇ ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ ಗಡಿ ಪ್ರದೇಶಗಳಲ್ಲಿಯೂ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಜನರ ಆರೋಗ್ಯ ಕಾಳಜಿಯಿಂದ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಸಿದವರ ಸಭೆ ಕರೆದು ತುರ್ತು ಕ್ರಮ ಕೈಗೊಳ್ಳಲು ಮುಂದಾಗಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗ ಬೇಕಿದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡದೇ, ಮಾಸ್ಕ ಧರಿಸುವುದು ಇನ್ನಿತರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button