Important
Trending

ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ ಕರ್ನಾಟಕ ಟಿ.ಇ.ಟಿ. ಪರೀಕ್ಷಾ ಸಿದ್ಧತಾ ಕಾರ್ಯಾಗಾರ

ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ ಕರ್ನಾಟಕ ಟಿ.ಇ.ಟಿ. ಪರೀಕ್ಷಾ ಸಿದ್ಧತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕುಮಟಾದ ಡಯಟ್‌ನ ಹಿರಿಯ ಶ್ರೇಣಿ ಪ್ರಾಧ್ಯಾಪಕರಾದ ಶ್ರೀಮತಿ. ಶುಭಾ ನಾಯಕರವರು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಟಿ.ಇ.ಟಿ.ಯನ್ನು ಜಾರಿಗೆ ತರಲಾಗಿದೆ. ಟಿ.ಇ.ಟಿ. ಪರೀಕ್ಷಾ ಸಿದ್ಧತೆಗೆ ಪಠ್ಯವಸ್ತುವಿನ ಅಧ್ಯಯನದ ಜೊತೆಗೆ ಶಿಕ್ಷಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಅಗತ್ಯವಿದೆಯೆಂದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆಯಾದ ಡಾ: ಶ್ರೀಮತಿ ಪ್ರೀತಿ ಭಂಡಾರಕರ್‌ರವರು ಮಾತಾನಾಡಿ ನಿರಂತರ ಅಧ್ಯಯನದಿಂದ ಮಾತ್ರ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಆಂತರಿಕ ಗುಣಮಟ್ಟ ಭರವಸಾ ಘಟಕದ ಸಂಯೋಜಕರಾದ ಡಾ: ವಿ. ಕೆ. ಭಟ್ಟ ರವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಹನಾ ನಾಯ್ಕ ಸ್ವಾಗತಿಸಿದರು. ಶಿಕ್ಷಕವಿದ್ಯಾರ್ಥಿ ಎಚ್. ಪ್ರಜ್ಞಾ ವಂದಿಸಿದರು. ಗೌರೀಶ ಮೂರೂರಕರ್ ಕಾರ್ಯಕ್ರಮ ನಿರೂಪಿಸಿದರು. ಐ.ಕ್ಯೂ.ಎ.ಸಿ. ಸಹಸಂಯೋಜಕರಾದ ಡಾ: ಡಿ. ಡಿ. ಭಟ್ಟ ಮತ್ತು ಪ್ರೊ. ಜಿ. ಡಿ. ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button