Follow Us On

WhatsApp Group
Focus News
Trending

ವಕೀಲರ ದಿನಾಚರಣೆ, ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ

ಸಿದ್ದಾಪುರ; ನಮ್ಮ ಗುರಿಯ ಜೊತೆಗೆ ಜೀವನದ ಹೆಜ್ಜೆ ಹಾಕಬೇಕು ಎದುರಾಗುವ ಸಮಸ್ಯೆ ಗಳನ್ನು ಮೆಟ್ಟಿ ನಿಂತರೆ ಇತಿಹಾಸ ನಿರ್ಮಾಣವಾಗುತ್ತದೆ    ಎಂದು ಸ್ಥಳೀಯ  ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಆದ ಸಿದ್ದರಾಮ ಎಸ್.ಹೇಳಿದರು . ಅವರು ಇಲ್ಲಿಯ ಆಶಾಕಿರಣ ಟ್ರಸ್ಟಿನ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆ ಹಾಳದಕಟ್ಟಾದಲ್ಲಿ ನ್ಯಾಯವಾದಿಗಳ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಲಯನ್ಸ ಕ್ಲಬ್‌ಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆ, ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಶ್ವ ಏಡ್ಸ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು.

ಶಿಕ್ಷಣ ಬದುಕಿಗೆ ಬೆಳಕು ನೀಡುವ ಕೆಲಸ ಮಾಡುತ್ತದೆ. ಯಾವಮಕ್ಕಳನ್ನೂ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ವಿಕಲಚೇತನರು ಸಂಗೀತ, ಓದಿನಲ್ಲೂ ಮುಂದಿದ್ದಾರೆ. ವಿಶೇಷ ಚೇತನರಿಗೆ ಹೆಚ್ಚಿನ ಅವಕಾಶ ನೀಡಿದರೆ ಅವರು ಸಕಲಾಂಗರನ್ನೂ ಮೀರಿಸುತ್ತಾರೆಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ವಿಕಲ ಚೇತನರು ಸಾಕಷ್ಟು ಸಂಖ್ಯೆಯಲ್ಲಿ ಆಯ್‌ಎಎಸ್, ಕೆಎಎಸ್ ಪದವಿಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ ಎಂದರು ನ್ಯಾಯಾಂಗ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ ಮಾಜಿ ರಾಷ್ಟçಪತಿ   ಬಾಬು ರಾಜೇಂದ್ರ ಪ್ರಸಾದರ ಜನ್ಮದಿನವನ್ನು ವಕೀಲರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಸಮಾಜದಲ್ಲಿಯ ಪ್ರತಿಯೊಬ್ಬರೂ ನ್ಯಾಯವಾದಿಗಳಿಗೆ ಗೌರವ ನೀಡುತ್ತಾರೆ. ನುರಿತ ಕಾನೂನು ತಜ್ಞರ ಸಲಹೆ, ಸೂಚನೆ, ಮಾರ್ಗದರ್ಶನ ಎಲ್ಲಾ ಕ್ಷೇತ್ರಗಳಿಗೂ ಅತ್ಯಗತ್ಯವಾಗಿದೆ ಎಂದು ಅವರು ವಕೀಲರ ದಿನಾಚರಣೆ ಕುರಿತು ನುಡಿದರು.         

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಜಯರಾಮ ಹೆಗಡೆ ಗೋಳಿಕೈ, ಕೆ.ಎಂ.ನಾಯ್ಕ ನಿಡಗೋಡ(ಸಿದ್ದಾಪುರ), ಬಿ.ಎಲ್.ನಾಯ್ಕ ಕೊಂಡ್ಲಿ, ವಿಶೇಷ ಚೇತನರಾದ ಎಂಆರ್‌ಡಬ್ಲು  ಶ್ರೀಧರ ಹರಗಿ, ಅಂಧ ಶಿಕ್ಷಕಿಯರಾದ ರೇಖಾ ಗೌಡ ಹಾಗೂ ಗೀತಾ ಎಚ್.ವಿ. ಅವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ದಿನೇಶಕುಮಾರ ಪಿ., ಸಹಾಯಕ ಸರ್ಕಾರಿ ಅಭಿಯೋಜಕ ಚಂದ್ರಶೇಖರ ಎಚ್.ಎಸ್., ಲ.ಸಿ.ಎಸ್.ಗೌಡರ್, ಲಯನ್ಸ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ಹೆಗಡೆ ಹೂವಿನಮನೆ, ಹಿರಿಯ ನ್ಯಾಯವಾದಿಗಳಾದ ಆರ್.ಎಂ.ಹೆಗಡೆ ಬಾಳೇಸರ ಹಾಗೂ ಎನ್.ಡಿ.ನಾಯ್ಕ ಐಸೂರ, ವಕೀಲರ ಸಂಘದ ಕಾರ್ಯದರ್ಶಿ ಎಂ.ಎನ್.ಹೆಗಡೆ ಅವರುಗಳು ಪಾಲ್ಗೊಂಡಿದ್ದರು.

ಸಭೆಯ ಅಧ್ಯಕ್ಷತೆಯನ್ನು ಆಶಾಕಿರಣ ಟ್ರಸ್ಟಿನ ಅಧ್ಯಕ್ಷ, ನ್ಯಾಯವಾದಿ ಡಾ.ರವಿ ಹೆಗಡೆ ಹೂವಿನಮನೆ ವಹಿಸಿದ್ದರು. ಅಂಧಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕು.ಮಧುರಾ ಸ್ವಾಗತಿಸಿದರು. ನ್ಯಾಯವಾದಿ ರಾಜೇಶ ಪಿ.ಭಟ್ಟ ಹಾಗೂ ಶಿಕ್ಷಕಿ ರೇಷ್ಮಾ ಬಾನು ಪರಿಚಯಿಸಿದರು.ಲ.ಜಿ.ಜಿ.ಹೆಗಡೆ ಬಾಳಗೋಡ ನಿರ್ವಹಿಸಿದರು. ಕು.ನಾಗರಾಜ ವಂದಿಸಿದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button