Follow Us On

WhatsApp Group
Focus News
Trending

ಸಿದ್ಧಾಪುರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ

ಸಿದ್ದಾಪುರ : ಪೊಲೀಸ್ ಇಲಾಖೆ ಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಿದ್ಧಾಪುರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನ ಕಾರವಾರ ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪ್ರಶಂಸನಾ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಿದರು. ಎ,ಎಸ್, ಐ, ನಾರಾಯಣ್ ಮಡಿವಾಳ, ಹವಾಲ್ದಾರ್ ಗಳಾದ ಬಸವರಾಜ್ ಇಂಗಳಸೂರ್, ರಮೇಶ್ ಕೂಡಲ್ , ಸಂಗೀತಾ ಕಾನಡೆ , ರಾಮ ಕುದ್ರುಗಿ, ಪೊಲೀಸರಾದ ಮೋಹನ್ ಗಾವಡಿ, ಯಶವಂತ ಬಿಳಗಿ, ಶಾಂತಲಾ ನಾಯ್ಕ್ ಇವರನ್ನು  ಎಸ್. ಪಿ  ಡಾll ಸುಮನ್ ಡಿ ಪೆನ್ನೇಕರ್, ರವರು ಸನ್ಮಾನಿಸಿ ಗೌರವಿಸಿದರು . 

ಈ ಸಂದರ್ಭದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿನ ವಾರಸುದಾರರಿಗೆ ಸ್ವತ್ತನ್ನು ಮರಳಿ ನೀಡಲಾಯಿತುಈ ವೇಳೆ  ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ  ಎಸ್ ಬದರಿನಾಥ್, ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ  ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ಪೊಲೀಸ್ ಉಪನಿರೀಕ್ಷಕರಾದ  ಮಹಾಂತಪ್ಪ ಕುಂಬಾರ್ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button