ಬಸ್ ನಲ್ಲಿ ಸಿಕ್ಕಿದ ಚಿನ್ನದ ಸರವನ್ನು ಮಾಲೀಕರಿಗೆ ಮರಳಿಸಿ, ಪ್ರಾಮಾಣಿಕತೆ ಮೆರೆದ ನಿರ್ವಾಹಕ: ಪ್ರಾಮಾಣಿಕ ವ್ಯಕ್ತಿಯನ್ನು ಅಭಿನಂದಿಸಿ
ಕಾರವಾರ: ಸರ್ಕಾರಿ ಬಸ್‌ನಲ್ಲಿ ಬಿದ್ದಿದ್ದ 12 ಗ್ರಾಮ್ ತೂಕದ ಚಿನ್ನದ ಸರ, ಕೊನೆಗೂ ಮಾಲೀಕನ ಸೇರಿದೆ. ಚಿನ್ನದ ಸರ ಕಳೆದುಕೊಂಡ ಮಾಲಿಕನನ್ನು ಹುಡುಕಿ ಸರವನ್ನು ಆತನಿಗೆ ಒಪ್ಪಿಸಿ ಪ್ರಾಮಾಣಿಕತೆಯನ್ನು ಮೆರೆದು, ಸಾರಿಗೆ ನಿರ್ವಾಹಕ ಶಂಕರ ಸದಾಶಿವ ಗೌರಕ್ಕನವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಸ್‌ನಲ್ಲಿ ಇರುವಾಗ ಚಿನ್ನದ ಸರವೊಂದು ನಿರ್ವಾಹಕ ಶಂಕರ್ ಅವರಿಗೆ ಸಿಕ್ಕಿದೆ.
ಈ ವೇಳೆ ಇದರ ಮಾಲೀಕರು ಯಾರು ಎಂದು ಆತ ಅನೇಕರನ್ನು ವಿಚಾರಿಸಿದ್ದಾರೆ., ಅಲ್ಲದೆ, ಚಿನ್ನದ ಸರ ಸಿಕ್ಕಿರುವ ಮಾಹಿತಿಯನ್ನು ಮೇಲಾಧಿಕಾರಿಯ ಗಮನಕ್ಕೂ ತಂದಿದ್ದಾರೆ. ಬಳಿಕ ಇದು ಕಿನ್ನರ ಗ್ರಾಮದ ದಿಗಾಳಿಯ ನಿವಾಸಿ ದಿವ್ಯಾ ಕೃಷ್ಣಾ ನಾಯ್ಕ ಎಂಬಾಕೆಗೆ ಸೇರಿದ್ದು ಎಂದು ತಿಳಿದುಬಂದಿಎ. ಆಕೆಗೆ ವಿಷಯ ತಿಳಿಸಿ, ಬಸ್ ಡಿಪೋಗೆ ಕರೆಯಿಸಿ, ಸರ ಆಕೆಯದ್ದೇ ಎಂದು ಖಚಿತ ಮಾಡಿಕೊಂಡ ನಂತರ ಪೊಲೀಸ್ ಠಾಣೆಯಲ್ಲಿ 12 ಗ್ರಾಂ ಚಿನ್ನದ ಸರವನ್ನು ಆಕೆಗೆ ಒಪ್ಪಿಸಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091