Follow Us On

WhatsApp Group
Important
Trending

ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ವೀರಸೇನಾನಿಗಳ ದುರ್ಮರಣಕ್ಕೆ ಶ್ರದ್ಧಾಂಜಲಿ: ದೀಪ ಹಚ್ಚಿ ನಮನ

ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಕುಮಟಾದ ಸೈನ್ಯವನದ ಹತ್ತಿರ ವಿಮಾನ ಅಪಘಾತದಲ್ಲಿ ಹುತಾತ್ಮರಾದ ಈ ದೇಶದ ಸಾಹಸಿ ಯೋಧ, ಮೂರು ಸೇನೆಗಳ ಜವಾಬ್ದಾರಿ ಹೊತ್ತು ಕಠಿಣ ಸಂದರ್ಭದಲ್ಲಿ ಭಾರತದ ಅಂತಃಶಕ್ತಿಯನ್ನು ವೃದ್ಧಿಸುವ ಕಾರ್ಯದಲ್ಲಿ ನಿರತರಾಗಿದ್ದ ಸೇನಾ ಮುಖ್ಯಸ್ಥ ರಾವತ್ ಹಾಗೂ ಇತರ 11 ಸೈನಿಕರ ಪಟವನ್ನು ಇಟ್ಟು ದೀಪವನ್ನು ಹಚ್ಚಿ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು. ಇದೆ ಸಂಧರ್ಭದಲ್ಲಿ ಬದುಕುಳಿದ ವಾಯುಸೇನೆಯ ಗ್ರೂಪ್ ಕಮಾಂಡರ್ ವರುಣ್ ಸಿಂಗ್ ಅವರು ಬೇಗ ಗುಣಮಖವಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

ವಿಸ್ಮಯ ನ್ಯೂಸ್, ಕುಮಟಾ

Back to top button