Follow Us On

WhatsApp Group
Important
Trending

ವೇಗವಾಗಿ ಬಂದು ಟೋಲ್ ಕಂಬಕ್ಕೆ ಡಿಕ್ಕಿಹೊಡೆದ ಕಾರು: ಟೋಲ್ ಸಿಬ್ಬಂದಿ ಸಾವು: ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯ

ಎಂಥ ವಿಪರ್ಯಾಸ ನೋಡಿ. ಆತ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಟೋಲ್ ಗೇಟ್ ಬಳಿ ನಿಂತಿದ್ದ. ವೇಗವಾಗಿ ಬಂದ ಕಾರಿನ ಚಾಲಕ ಈತನ ಜೀವವನ್ನೇ ತೆಗೆದಿದ್ದಾನೆ. ಎಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋಗಿದೆ.

ಭಟ್ಕಳ ಕಡೆಯಿಂದ ಶಿರೂರು ಕಡೆ ಹೋಗುತ್ತಿದ್ದ ವೇಗವಾಗಿ ಬಂದ ಕಾರು ಟೋಲ್ ಗೇಟ್ ಮುಂಬಾಗದ ಗೋಡೆಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ನಸುಕಿನ ಜಾವ ನಡೆದಿದೆ. ಈ ಸಂಧರ್ಭದಲ್ಲಿ ಗೋಡೆಯ ಸಮೀಪವಿದ್ದ  ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (44)ಗಂಭೀರ ಗಾಯಗೊಂಡು ಆಸ್ಪತ್ರೆಯ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದವರು ಕೂಡಾ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಘಟನೆ ಬಳಿಕ ಟೋಲ್ ಗೇಟ್ ನಿರ್ಲಕ್ಷ ಹಾಗೂ ಸ್ಥಳೀಯರಿಗೆ ಮನ್ನಣೆ ನೀಡದಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ದಿನದ ಹಿಂದೆ ವಿವಿಧ ಸಂಘಟನೆಗಳು ಸೇರಿ ಎಚ್ಚರಿಕೆ ನೀಡಿದ್ದರು ಟೋಲ್ ಅಧಿಕಾರಿಗಳು ಪರಿಸ್ಥಿತಿ ಸುಧಾರಿಸಿಲ್ಲ. ಮಾತ್ರವಲ್ಲದೆ ಟೋಲ್ ಮೆನೇಜರ್ ಕರೆ ಸ್ವೀಕರಿಸಿಲ್ಲ. ರಾತ್ರಿ ಘಟನೆ ನಡೆದರು ಬೆಳಿಗ್ಗೆ ತನಕ ಸಂಬoಧಿಸಿದ ಅಧಿಕಾರಿಗಳು ಬಂದಿಲ್ಲ.

ಸೂಕ್ತ ಪರಿಹಾರ ನೀಡಿ ಕ್ರಮಕೈಗೊಳ್ಳದಿದ್ದರೆ ಟೋಲ್ ಗೇಟ್ ಎದುರು ಶವ ಇಟ್ಟು ಪ್ರತಿಭಟಿಸಲಾಗುವುದು ಸ್ಥಳೀಯರು ಎಂದರು.ಬಳಿಕ ಟೋಲ್ ಅಧಿಕಾರಿಗಳು ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದು ಸೂಕ್ತ ಪರಿಹಾರ ದೊರೆಯುವ ವರಗೆ ಹಿಂದಿರುಗುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಕೊಲ್ಲೂರು ಠಾಣಾಧಿಕಾರಿ ನಾಸೀರ್ ಹುಸೈನ್, ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ, ಠಾಣಾಧಿಕಾರಿ ಅನೀಲ್, ಟೋಲ್ ಮುಖ್ಯಸ್ಥರಾದ ಜಿ.ಎಮ್ ವಿವೇಕ ಗರಡಿಕರ್, ಸಿ.ಜಿ.ಎಮ್ ಮೋಹನ್ ದಾಸ್, ಸ್ಥಳೀಯರಾದ ರಾಮ ಮೇಸ್ತ, ಶ್ರೀಧರ ಮೇಸ್ತ, ಗಿರೀಶ್ ಮೇಸ್ತ, ರಘುರಾಮ ವಿ.ಮೇಸ್ತ, ಮಧುಸೂಧನ್, ಕೇಶವ ಮೇಸ್ತ, ಶಂಕರ ಮೇಸ್ತ, ರವೀಂದ್ರ ಆರ್.ಮೇಸ್ತ, ವಾಸು ಮೇಸ್ತ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button