ಶಿರಸಿ: ಸೋಂದಾ ಜೈನ ಮಠದಲ್ಲಿ ಕಳ್ಳರು, ದೇವರ ಕಾಣಿಕೆ ಹುಂಡಿ ಹಾಗೂ ದೇವರಿಗೆ ಹಾಕಿದ ತಾಳಿಯೊಂದಿಗೆ ಕಳ್ಳರು ನಾಪತ್ತೆಯಾಜದ ಘಟನೆ ನಡೆದಿದೆ. ತಡರಾತ್ರಿ ಜೈನಮಠಕ್ಕೆ ಸೇರಿದ ಶ್ರೀಕ್ಷೇತ್ರಪಾಲ ಆದಿನಾಥ ಮಂದಿರ, ಪಾರ್ಶ್ವನಾಥ ಮಂದಿರ, ವೆಂಕಟ್ರಮಣ ದೇವಸ್ಥಾನಗಳಿಗೆ ಸೇರಿದ ಕಾಣಿಕೆ ಹುಂಡಿಯಲ್ಲಿನ 13 ಸಾವಿರ ನಗದು ಹಾಗೂ 2 ಗ್ರಾಂ ತೂಕದ ಬಂಗಾರದ ತಾಳಿ ಇರುವ 3 ಕರಿಮಣಿ ಸರವನ್ನು ದೋಚಿದ್ದಾರೆ. ಅಲ್ಲದೆ, 1 ಸಿಸಿ ಟಿವಿ ಕ್ಯಾಮೆರಾ, ಡಿವಿಆರ್, ಅನ್ನು ಹೊತ್ತೊಯ್ದಿದ್ದಾರೆ.
ಕಾರವಾರದಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ, ಪರಿಶೀಲನೆ ನಡೆಸಿದ್ದು, ಖಾಕಿ ಪಡೆ ತೀವ್ರ ತನಿಖೆ ಆರಂಭಿಸಿದೆ. ರವಿ ನಾಯ್ಕ ಹಾಗೂ ಸಿಪಿಐ ರಾಮಚಂದ್ರ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಕಳ್ಳರ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091