Follow Us On

WhatsApp Group
Important
Trending

ರಾಮತೀರ್ಥದ ಶ್ರೀಧರಾಶ್ರಮದ ಭಗವಾನ್ ಸದ್ಗುರು ಶ್ರೀಧರ ಸ್ವಾಮೀಜಿಯವರ ಪಾದುಕೆ ಸಂಚಾರ ಆರಂಭ

ಹೊನ್ನಾವರ: ತಾಲೂಕಿನ ರಾಮತೀರ್ಥದ ಶ್ರೀಧರಾಶ್ರಮದ ಭಗವಾನ್ ಸದ್ಗುರು ಶ್ರೀಧರ ಸ್ವಾಮೀಜಿಯವರ ಪಾದುಕೆ ಸಂಚಾರ ಆರಂಭಗೊAಡಿದೆ. ಡಿಸೆಂಬರ್ 24 ರಿಂದ ಡಿಸೆಂಬರ್ 26 ರ ವರೆಗೆ ಹಳಿಯಾಳದಲ್ಲಿ ನಡೆಯಲಿದೆ. ಭಕ್ತಾದಿಗಳು ಭಿಕ್ಷೆಗಾಗಿ ಬಂದಾಗ ಅವರ ಜೋಳಿಗೆಯಲ್ಲಿ ಯಥಾ ಶಕ್ತಿ ಧನ ಧಾನ್ಯ, ಅಕ್ಕಿ ,ಬೇಳೆ, ತೆಂಗಿನ ಕಾಯಿಗಳನ್ನು ಸಲ್ಲಿಸಬಹುದು. ಹಾಗೂ ಸದ್ಗುರುಗಳ ಪಾದುಕೆಗಳನ್ನು ಮನೆಗೆ ಕರೆಯಿಸಿ ಪೂಜೆ ಸಲ್ಲಿಸಲೂ ಕೂಡಾ ಅವಕಾಶ ಇರುತ್ತದೆ ಎಂದು ತಿಳಿಸಲಾಗಿದೆ.

ಈ ಮೂರು ದಿನಗಳ ಕಾಲ ಪಾದುಕೆಗಳನ್ನು ನಗರದ ದುರ್ಗಾ ನಗರದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಇರಿಸಲಾಗಿದೆ. ಈ ಹಿಂದೆಯೂ ಕೂಡಾ ಹಳಿಯಾಳ ನಗರದಲ್ಲಿ ಮೂರು ಬಾರಿ ಈ ಕಾರ್ಯಕ್ರಮ ನಡೆಸಲಾಗಿತ್ತು. ಅದೇ ಪ್ರಕಾರವಾಗಿ ಈ ಬಾರಿಯೂ ಕೂಡಾ ಭಕ್ತಾದಿಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಆಶ್ರಮದ ಪ್ರಧಾನರು ಕೇಳಿಕೊಂಡಿದ್ದಾರೆ..

ವಿಸ್ಮಯ ನ್ಯೂಸ್, ಹೊನ್ನಾವರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Back to top button