Important
Trending

ಹೆದ್ದಾರಿಯಲ್ಲಿ ಕಾಣಿಸಿಕೊಂಡ‌ ಅಪರೂಪದ ಪಕ್ಷಿ: ನಿತ್ರಾಣಗೊಂಡಿದ್ದ ಪಕ್ಷಿಗೆ ಸ್ಥಳೀಯರಿಂದ ಉಪಚಾರ

ಅಂಕೋಲಾ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ಅಪರೂಪದ, ಹಿಮಾಲಯದ ದೊಡ್ಡ ರಣಹದ್ದು ಕಾಣಿಸಿಕೊಂಡಿದೆ. ಹಿಮಾಲಯನ್ ಗ್ರಿಫೋನ್ ವಲ್ಡರ್ ಹೆಸರಿನ ಈ ರಣಹದ್ದು ನಿತ್ರಾಣಗೊಂಡಿದ್ದು,ಇದನ್ನು ಸ್ಥಳೀಯ ಯುವಕರು ಉಪಚರಿಸಿದ್ದಾರೆ.

ಹಾರವಾಡ ಅರಣ್ಯಪ್ರದೇಶದ ಸುತ್ತಮುತ್ತ
ಹಾರಾಡುತ್ತಿದ್ದ ಈ ರಣಹದ್ದು ಬಳಿಕ ನಿತ್ರಾಣಗೊಂಡಂತಾಗಿ ರಸ್ತೆಯಂಚಿಗೆ ಬಂದು ಕುಳಿತಿತ್ತು ಎನ್ನಲಾಗಿದೆ. ಈ ವೇಳೆ ಇದನ್ನು ಕಂಡ ಸ್ಥಳೀಯ ಯುವಕರು ಉಪಚರಿಸಿ ರಕ್ಷಿಸಿದ್ದಾರೆ.

ವಿಸ್ಮಯ ನ್ಯೂಸ್ ಅಂಕೋಲಾ

Back to top button