ರಾಜ್ಯದ ಪ್ರಸಿದ್ಧ ಶಿರಸಿ ಜಾತ್ರೆಯ ದಿನಾಂಕ ಘೋಷಣೆ: ಮಾರ್ಚ್ 15 ರಿಂದ 23ರ ವರೆಗೆ ನಡೆಯಲಿದೆ ಜಾತ್ರೆ
ಶಿರಸಿ : ಅತ್ಯಂತ ಜಾಗೃತ ಶಕ್ತಿಪೀಠಗಳಲ್ಲಿ ಒಂದಾಗಿರುವ ಉತ್ತರಕನ್ನಡದ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯ ದಿನಾಂಕ ಅಂತಿಮವಾಗಿದ್ದು, ಮಾರ್ಚ್ 15 ರಿಂದ 23ರ ವರೆಗೆ ಜಾತ್ರೆ ನೆರವೇರಲಿದೆ. ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಜಾತ್ರೆಗೆ ಸಂಬoಧಿಸಿದ ವಿಧಿ-ವಿಧಾನಗಳು ಜನವರಿ 26 ರಿಂದ ಪ್ರಾರಂಭವಾಗಲಿವೆ. ಜನವರಿ 26 ರಂದು ದೇವಿಯ ಮಂಟಪ ಕಳಚುವುದು, ಫೆಭ್ರವರಿ 22 ರಂದು ಮೊದಲ ಹೊರಬೀಡು, ಫೆಬ್ರವರಿ 25 ರಂದು 2ನೇ ಹೊರಬೀಡು, ಮಾರ್ಚ್ 1 ರಂದು 3ನೇ ಹೊರಬೀಡು ನಡೆಯಲಿದೆ. ಮಾರ್ಚ್4 ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.
ಮಾರ್ಚ್ 15ರ ಮಧ್ಯಾಹ್ನ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 16 ರಂದು ಬೆಳಿಗ್ಗೆ ದೇವಿಯ ರಥಾರೋಹಣ ನಡೆಯಲಿದ್ದು, ಜಾತ್ರಾ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನೆ ಜರುಗುವುದು. ಮಾರ್ಚ್ 17 ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ. ಮಾರ್ಚ್ 23 ರಂದು ಬೆಳಿಗ್ಗೆ ಜಾತ್ರೆ ಮುಕ್ತಾಯವಾಗಲಿದೆ.
ವಿಸ್ಮಯ ನ್ಯೂಸ್, ಶಿರಸಿ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ:
ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.