Follow Us On

WhatsApp Group
Big News
Trending

ಕಲಗ ಮತ್ತು ನೀಲಿಕಲ್ಲು ನೀವು ಬೆಳೆಯಬಹುದು? ಔಷಧ ಮತ್ತು ಸೌಂದರ್ಯ ವರ್ಧಕ ತಯಾರಿಕೆಯಲ್ಲಿಯೂ ಬಳಸುವುದರಿಂದ ಹೆಚ್ಚಿನ ಬೇಡಿಕೆ

ಅಂಕೋಲಾ: ಪರಿಸರ ನಾಶ,ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದ ಮತ್ಸ್ಯ . ಸಂಪತ್ತು ಕಡಿಮೆಯಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿರುವ ನಡುವೆಯೇ,ಆಧುನಿಕ ತಂತ್ರಜ್ಞಾನ ಬಳಸಿ ಸಿಗಡಿ ಕೃಷಿ ಮಾಡಿ ಬಂಪರ್ ಬೆಳೆ ಬೆಳೆಯುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ ಇಲ್ಲವೇ ಕೇಳಿರುತ್ತಾರೆ. ಅದರ ಮುಂದುವರಿದ ಭಾಗವಾಗಿ ಕುರುಡೆ ಮತ್ತಿತರ ಮೀನುಗಳ ಪಂಜರ ಕೃಷಿ ಅಲ್ಲಲ್ಲಿ ಕಂಡುಬರುತ್ತದೆ. ಹಸಿರು ಪಾಚಿ, ಕೃತಕ ಮುತ್ತು ತಯಾರಿಕೆಯಾ ಆರಂಭವಾಗಿದೆ. ಅಂತಹುದೇ ಇನ್ನೊಂದು ಪ್ರಯತ್ನವಾಗಿ, ಕಲಗ ಮತ್ತು ನೀಲಿಕಲ್ಲು ಬೆಳೆಸುವ ಪದ್ಧತಿ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ,ಕಾರವಾರದ ಕಾಳಿನದಿ ವ್ಯಾಪ್ತಿಯಲ್ಲಿ ಸೇರಿದಂತೆ ಇತರೆಡೆ ಪ್ರಚಲಿತ ಗೊಳ್ಳುತ್ತಿದೆ.                 

ಅಂಕೋಲದಲ್ಲಿಯೂ ಹೊಸ ಪ್ರಯತ್ನವಾಗಿ ನೀಲಿಕಲ್ಲು ಬೆಳೆಯುವ ಪ್ರಾತ್ಯಕ್ಷತೆಯನ್ನು ಜನವರಿ 7ರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ , ಹೊಸ ಪ್ರಯತ್ನವಾಗಿ ಕೋಸ್ಟಲ್ &ಮರೈನ್ ಇಕೋ ಸಿಸ್ಟಮ್ ಘಟಕ ಕಾರವಾರ ಇವರ ಅಶ್ರಯದಲ್ಲಿ ಅಂಕೋಲಾ ತಾಲೂಕಿನ ಬೇಳಾ ಬಂದರ ಹಿನ್ನೀರು ಪ್ರದೇಶದಲ್ಲಿ ನೀಲಿಕಲ್ಲು (Green Mussel )  ಮತ್ತು ಕಲಗ (Oyster ) ಕೃಷಿ  ಕುರಿತು ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಾಗು ಕಡಲ ಜೀವ ವೈವಿಧ್ಯತೆ ಸಂರಕ್ಷಣೆ ಬಗ್ಗೆ ಜಾಗ್ರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.         

ಎಸಿಎಫ್ ಮಂಜುನಾಥ ನಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅರಣ್ಯ ಇಲಾಖೆಯ ಮರೈನ್ ಇಕೋ    ವಿಭಾಗದ  ಹೊಸ ಯೋಜನೆಯಿಂದ ಹಲವು ಕುಟುಂಬಗಳಿಗೆ ಜೀವನಾಧಾರವಾಗಿರುವ ಈ ಹೊಸ ಕೃಷಿ ಪದ್ಧತಿಯಿಂದ  ಆದಾಯೋತ್ಪನ್ನ ಹೆಚ್ಚಿಸಿ ಕೊಳ್ಳುವ ವಿಫುಲ ಅವಕಾಶಗಳಿದ್ದು, ಸ್ಥಳೀಯರು ಮುಂದೆ ಬಂದು ಸಹಕಾರ ಮನೋಭಾವನೆಯಿಂದ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. 

ವಿಜ್ಞಾನಿ ಅಪೂರ್ವ ಕುಲಕರ್ಣಿ ಮಾತನಾಡಿ ಹೆಚ್ಚುತ್ತಲಿರುವ  ಜನ ಸಂಖ್ಯೆಗೆ ಅನುಗುಣವಾಗಿ ಹೆಚ್ಚು ಹೆಚ್ಚು ಬೆಳೆ ಬೆಳೆಯ ಬೇಕಾದ  ಸವಾಲು ಮುಂದಿದೆ. ಆಧುನಿಕ ಕೃಷಿ ಪದ್ಧತಿ ಮೂಲಕ ಇವೆಲ್ಲಾ ಸಾಧ್ಯವಿದ್ದು ಇಲ್ಲಿ ನೀಲಿಕಲ್ಲು ಮತ್ತು ಕಲಗ ಕೃಷಿ ಬೆಳವಣಿಗೆ, ಪರಿಣಾಮ ಆಧರಿಸಿ ಹೆಚ್ಚಿನ ಬೆಳೆಗಾರರಿಗೆ ಅನುಕೂಲ ಕಲ್ಪಿಸೋಣ ಎಂದರು.  ನ್ಯಾಯವಾದಿ ಉಮೇಶ್ ನಾಯ್ಕ್ ಮಾತನಾಡಿ ಯಾವುದೇ ಯೋಜನೆಗಳನ್ನು ಆರಂಭಿಸುವ ಮುನ್ನ ಇದರ ನಿರ್ವಹಣೆಯ ಜವಾಬ್ದಾರಿ ಇರಬೇಕು. ಈ ಯೋಜನೆ ಇಲ್ಲಿ ಹಮ್ಮಿಕೊಂಡಿದ್ದು ಹೆಮ್ಮೆ. ಆದರೆ ಕಾಳಜಿ ಅಗತ್ಯ ಎಂದರು.   

ಅರಣ್ಯ ಇಲಾಖೆಯ ಕೋಸ್ಟಲ್ &ಮರೈನ್ ಇಕೋ ಸಿಸ್ಟಮ ನ ಕಾರವಾರ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರಮೋದ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ಕೃಷಿ ಪದ್ಧತಿ ಬಗ್ಗೆ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದ ಕುರಿತು ತಿಳಿಸಿದರು.. ಚಂದ್ರಶೇಖರ್ ಕಟ್ಟಿಮನಿ ಸ್ವಾಗತಿಸಿದರು.  ಬೊಬ್ರುವಾಡಾ ಗ್ರಾಪಂ ಮಾಜಿ ಅಧ್ಯಕ್ಷ ಅನಿಲ ರಾಮಾ ನಾಯ್ಕ, ಸದಸ್ಯ ರವಿ ನಾಯ್ಕ್, ಸ್ಥಳೀಯ ಪ್ರಾ. ಶಾಲಾ ಮುಖ್ಯಾಧ್ಯಾಪಕಿ ವಿನುತಾ ನಾಯಕ್, ಸಹ ಶಿಕ್ಷಕಿ ಸುಮನಾ ನಾಯಕ, ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು, ಪ್ರಾಥಮಿಕ ಮತ್ತು ಐಟಿಐ ಕಾಲೇಜ್ ಗಳ ವಿದ್ಯಾರ್ಥಿಗಳು, ಊರ ನಾಗರಿಕರು ಹಾಗೂ ಇತರೆ ಪ್ರಮುಖರು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಸಂಬಂಧಿತ ಇಲಾಖೆಯ ಅಧಿಕಾರಿ ಅಭಿಷೇಕ ಡಿ ಮತ್ತು ಸಿಬ್ಬಂದಿಗಳು ಸಹಕರಿಸಿದರು.                             

ಈ ನೂತನ ಕೃಷಿ ಪದ್ಧತಿಯಲ್ಲಿ ಬೆಳೆಯುವ ನೀಲಿಕಲ್ಲು ಮತ್ತಿತರ ಜೀವ ಪ್ರಭೇದಗಳನ್ನು ಕೇವಲ ಆಹಾರ ಪದಾರ್ಥವನ್ನಾಗಿಯಷ್ಟೇ ಬಳಸದೇ, ಔಷಧ ಹಾಗೂ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲೂ  ಬಳಸುವುದರಿಂದ ಅವುಗಳ ಬೆಳವಣಿಗೆ ಮತ್ತು ಗುಣಮಟ್ಟ ಆಧರಿಸಿ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ                   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button