Follow Us On

WhatsApp Group
Focus News
Trending

ವೀಕೆಂಡ್ ಕರ್ಪ್ಯೂ, ಜಾತ್ರೆ ಹೆಸರಿನಲ್ಲಿ ನಿರ್ಭಂದ: ಸಾಂಸ್ಕೃತಿಕ ಕಲಾವಿದರ ಅಸಮಾಧಾನ

ಅಂಕೋಲಾ: ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ಬೇರೆ ಬೇರೆ ಕಾರಣಗಳಿಂದ ರಂಗ ಚಟುವಟಿಕೆಗಳು ನಡೆಯದೇ  ರಂಗಭೂಮಿಯನ್ನು ನಂಬಿ ಜೀವನ ಸಾಗಿಸುತ್ತಿರುವ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ಮತ್ತೆ ರಾತ್ರಿ ಕರ್ಫ್ಯೂ,ಜಾತ್ರೆಗಳ ನಿರ್ಬಂಧಗಳ  ಹೆಸರಿನಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಅವಕಾಶ ನೀಡದೇ ಇರುವ ಕುರಿತು ತಾಲೂಕಿನ ರಂಗಭೂಮಿ ಮತ್ತು ಯಕ್ಷಗಾನ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.

ಅಂಕೋಲಾ ತಾಲೂಕಿನ ಸುತ್ತ ಮುತ್ತ ಸಾಮಾನ್ಯವಾಗಿ ಡಿಸೆಂಬರ್  ನಿಂದ ಮೇ ತಿಂಗಳ ಅವಧಿಯಲ್ಲಿ ವಿವಿಧ ಜಾತ್ರಾ ಮಹೋತ್ಸವಗಳ ಪ್ರಯುಕ್ತ ಸ್ಥಳೀಯವಾಗಿ ನಾಟಕ ಮತ್ತು ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ ಸುಮಾರು ನೂರಕ್ಕೆ ಸಮೀಪ ನಾಟಕಗಳು ಮತ್ತು ಅಷ್ಟೇ ಸಂಖ್ಯೆಯಲ್ಲಿ ಯಕ್ಷಗಾನ ಬಯಲಾಟ, ಜಾನಪದ ಸಂಗ್ಯಾಬಾಳ್ಯಾದಂತ ಪ್ರದರ್ಶನಗಳು ಜರಗುವ ಮೂಲಕ ಅದನ್ನೇ ನಂಬಿದ ನೂರಾರು ಜನ ಕಲಾವಿದರ ಬದುಕು ಸಾಗಲು ದಾರಿಯಾಗುತ್ತಿತ್ತು. 

ಆದರೆ 2018 ರಿಂದ ಒಂದಲ್ಲ ಒಂದು ಕಾರಣದಿಂದ ತಾಲೂಕಿನಲ್ಲಿ ಕಲಾ ಪ್ರದರ್ಶನಗಳಿಗೆ ಅವಕಾಶ ನಿರಾಕರಿಸುವ ಮೂಲಕ ಬಡ ಕಲಾವಿದರ ಹೊಟ್ಟೆ ಮೇಲೆ ಹೊಡೆಯುವ ಕೆಲಸಗಳು ನಡೆಯುತ್ತಿವೆ, 2018 ಮತ್ತು 2019 ರಲ್ಲಿ ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ನಾಟಕ ಮತ್ತು ಯಕ್ಷಗಾನಗಳಿಗೆ ಅವಕಾಶ ನಿರಾಕರಿಸಲಾಯಿತಾದರೇ ಮುಂದಿನ ಎರಡು ವರ್ಷಗಳ ಕಾಲ ಕೊವೀಡ್ ಲಾಕ್ ಡೌನ್ ಸರ್ಕಾರದ ನಿಯಮಗಳ ಹೆಸರಿನಲ್ಲಿ ರಂಗಸ್ಥಳದ ಚಟುವಟಿಕೆಗಳು ನಡೆಯಲಿಲ್ಲ ಈ ವರ್ಷ ಇನ್ನೇನು ರಂಗಭೂಮಿ ಚಟುವಟಿಕೆಗಳು ಆರಂಭವಾಗುತ್ತಿದೆ ಎನ್ನುವ ಆಶಾಭಾವನೆಯಲ್ಲಿ ಕಲಾವಿದರು ಇದ್ದಾಗಲೇ ಮತ್ತೊಮ್ಮೆ ರಾತ್ರಿ ಕರ್ಫ್ಯೂ, ಕೋವೀಡ್ ನಿಯಮಗಳ ಪಾಲನೆ ಹೆಸರಿನಲ್ಲಿ ಅನುಮತಿ ನೀಡದೇ ಇರುವುದರಿಂದ ಕಲಾವಿದರು ದಾರಿ ಕಾಣದಂತಾಗಿದ್ದಾರೆ.

ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸೌಂಡ ಸಿಸ್ಟಮ್, ಸಂಗೀತ, ರಂಗ ಸಜ್ಜಿಕೆಯಂತ ವ್ಯವಸ್ಥೆ ಹೊಂದಿದವರು ಸಾಲ ಕಟ್ಟಲು ಪರದಾಟ ನಡೆಸುವ ಪರಿಸ್ಥಿತಿ ಉದ್ಭವವಾಗಿದೆ.ಸರ್ಕಾರ ಕಲಾವಿದರ ಪರಿಸ್ಥಿತಿ ಅರಿತು ಮಾರ್ಗಸೂಚಿಯ ಪಾಲನೆಯೊಂದಿಗೆ ನಾಟಕ ಮತ್ತು ಯಕ್ಷಗಾನ ಪ್ರದರ್ಶನಗಳಿಗೆ ಅವಕಾಶ ನೀಡುವ ಮೂಲಕ ಕಲಾವಿದರನ್ನು ಉಳಿಸಲಿ ಎಂದು ತಾಲೂಕಿನ ರಂಗಭೂಮಿ ಕಲಾವಿದರ ವೇದಿಕೆ ಆಗ್ರಹಿಸಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Back to top button