Important
Trending

ಹೊನ್ನಾವರದಲ್ಲಿ 78 ಕೋವಿಡ್ ಕೇಸ್: ಅಂಕೋಲಾದಲ್ಲಿ 70 ಪ್ರಕರಣ

ಹೊನ್ನಾವರ: ತಾಲೂಕಿನಲ್ಲಿ ಇಂದು ಕರೋನಾ ಸ್ಪೋಟಗೊಂಡಿದೆ. ತಾಲೂಕಿನಲ್ಲಿ ಒಟ್ಟು 78 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ, ಹೊನ್ನಾವರ ಪಟ್ಟಣದಲ್ಲಿ-15 ಜನರಿಗೆ ಗ್ರಾಮೀಣ ಭಾಗವಾದಲ್ಲಿ 63 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಹೊನ್ನಾವರ ಪಟ್ಟಣದ 37 ವರ್ಷದ ಪುರುಷ,  30 ವರ್ಷದ ಮಹಿಳೆ, ಪ್ರಭಾತನಗರದ 13 ವರ್ಷದ ಬಾಲಕಿ, 13 ವರ್ಷದ ಬಾಲಕ, 20  ವರ್ಷದ ಯುವಕ, 16 ವರ್ಷದ ಬಾಲಕಿ, 51 ವರ್ಷದ ಪುರುಷ, 50 ವರ್ಷದ ಮಹಿಳೆ, 38 ವರ್ಷದ ಮಹಿಳೆ, 48 ವರ್ಷದ ಪುರುಷ, 60 ವರ್ಷದ ಮಹಿಳೆ,  ಬಂದರ ರಸ್ತೆಯ 62 ವರ್ಷದ ಪುರುಷ, 63 ವರ್ಷದ ಪುರುಷ, 54 ವರ್ಷದದ ಮಹಿಳೆ, 33 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

ಕಾಸರಕೋಡನ 39 ವರ್ಷದ ಮಹಿಳೆ, 21 ವರ್ಷದ ಯುವತಿ, 47 ವರ್ಷದ ಪುರುಷ, 21 ವರ್ಷದ ಯುವತಿ, 52 ವರ್ಷದ ಮಹಿಳೆ, 55 ವರ್ಷದ ಪುರುಷ,
ಮಂಕಿಯ 48 ವರ್ಷದ ಮಹಿಳೆ, 55 ವರ್ಷದ ಪುರುಷ,
ಮೋಳ್ಕೋಡನ 11 ವರ್ಷದ ಬಾಲಕಿ, 5 ವರ್ಷದ ಬಾಲಕಿ, 42 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಇಡಗುಂಜಿಯ 39 ವರ್ಷದ ಪುರುಷ,  64 ವರ್ಷದ ಮಹಿಳೆ, 39 ವರ್ಷದ ಮಹಿಳೆ, 16 ವರ್ಷದ ಬಾಲಕ,
ಕರ್ಕಿಯ 40 ವರ್ಷದ ಮಹಿಳೆ, 9 ವರ್ಷದ ಬಾಲಕ, 6 ವರ್ಷದ ಬಾಲಕ, 19 ವರ್ಷದ ಯುವಕ, 57 ವರ್ಷದ ಪುರುಷ,ಮುಗ್ವಾದ 16 ವರ್ಷದ ಬಾಲಕ, 16 ವರ್ಷದ ಬಾಲಕ, 21 ವರ್ಷದ ಯುವಕ, 26 ವರ್ಷದ ಯುವಕ, 22 ವರ್ಷದ ಯುವತಿ, 89 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಅರೇಂಗಡಿಯ 25 ವರ್ಷದ ಯುವತಿ, ಸಾಲಕೋಡಿನ 57 ವರ್ಷದ ಮಹಿಳೆ,  ಹೊದ್ಕೆಶಿರೂರಿನ 30 ವರ್ಷದ ಯುವಕ, 12 ವರ್ಷದ ಬಾಲಕಿ, ದುಗ್ಗೂರನ 22 ವರ್ಷದದ ಯುವಕ, ಚಂದಾವರದ 12 ವರ್ಷದ ಬಾಲಕಿ, 15 ವರ್ಷದ ಬಾಲಕಿಗೆ ಕೋವಿಡ್ ದೃಢಪಟ್ಟಿದೆ.

ಹಳದಿಪುರದ 25 ವರ್ಷದ ಯುವಕ,  ಚಿಪ್ಪಿಹಕ್ಲದ 16 ವರ್ಷದ ಬಾಲಕಿ, ಕಡತೋಕಾದ 26 ವರ್ಷದ ಯುವತಿ, 36 ವರ್ಷದ ಪುರುಷ, 34 ವರ್ಷದ ಯವಕ, 38 ವರ್ಷದ ಪುರುಷ, 20 ವರ್ಷದ ಯುವತಿ, 67 ವರ್ಷದ ಮಹಿಳೆ, 25 ವರ್ಷದ ಯುವಕ, ನವಿಲಗೋಣದ 13 ವರ್ಷದ ಬಾಲಕನಿಗೂ ದೃಡಪಟ್ಟಿದೆ.

ಗುಂಡಿಬೈಲ್  70 ವರ್ಷದ ಮಹಿಳೆ, ಹೋಸಾಡದ 19 ವರ್ಷದ ಯುವತಿ, ಮಾವಿನಕುರ್ವಾದ 50 ವರ್ಷದ ಪುರುಷ, 14 ವರ್ಷದ ಬಾಲಕ, 47 ವರ್ಷದ ಮಹಿಳೆ, 21 ವರ್ಷದ ಯುವಕ, 46 ವರ್ಷದ ಮಹಿಳೆ, 21 ವರ್ಷದ ಯುವತಿ, 21 ವರ್ಷದ ಯುವಕ, 16 ವರ್ಷದ ಬಾಲಕಿ, 21 ವರ್ಷದ ಮಹಿಳೆ, 51 ವರ್ಷದ ಪುರುಷ, ಕಾವೂರಿನ 18 ವರ್ಷದ ಯುವತಿ, ಖರ್ವಾದ 10 ವರ್ಷದ ಬಾಲಕಿ, 35 ವರ್ಷದ ಪುರುಷ, ಹಡಿನಬಾಳದ 33 ವರ್ಷದ ಯುವಕ, ಸಂಶಿಯ 50 ವರ್ಷದ ಮಹಿಳೆ, ಕೋಡಾಣಿಯ 23 ವರ್ಷದ ಯುವತಿ, ಉಪ್ಪೋಣಿಯ 47 ವರ್ಷದ ಮಹಿಳೆ, 36 ವರ್ಷದ ಪುರುಷ. ಸೇರಿದಂತೆ ಇಂದು ಹೊನ್ನಾವರ ತಾಲೂಕಿನಲ್ಲಿ ಇಂದು ಒಟ್ಟು 78 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ,

ಒಂದೇ ದಿನಕ್ಕೆ 70 ಕೇಸ್! 4000 ಸನಿಹಕ್ಕೆ ತಲುಪಿದ ಒಟ್ಟೂ ಸೋಂಕಿತರು.              

ಅಂಕೋಲಾ : ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಇಂದು (18 – 01 – 22 ಮಂಗಳವಾರ) ದಿನವೊಂದರಲ್ಲಿಯೇ 70 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ತಾಲೂಕಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 156 ಕ್ಕೆ ಏರಿಕೆ ಆಗಿದೆ.ಕೋವಿಡ್ ಮೊದಲನೇ ಅಲೆಯಿಂದ ಹಿಡಿದು ಈವರೆಗೆ ಒಟ್ಟೂ 3972 ಸೋಂಕು ಪ್ರಕರಣಗಳು ದಾಖಲಾದಂತಾಗಿದೆ.   

ಗುರುವಾರ  30 ಜನರು ಗುಣಮುಖರಾದವರ ಯಾದಿಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ 2  ಜನ ಚಿಕಿತ್ಸೆಗೆ  ಒಳಪಟ್ಟಿದ್ದು, 154 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಕೋವಿಡ್ ನಿಂದ ಈ ವರೆಗೆ 74 ಜನ ಮೃತರಾಗಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ

Back to top button