Follow Us On

WhatsApp Group
Important
Trending

ನಿರ್ಮಾಣ ಹಂತದ ಪುರಸಭೆ ಪುರಭವನದ ಕಟ್ಟಡವೇರಿ ಜಿಗಿದು ಗಾರ್ಡ್ ಪತ್ನಿ ಆತ್ಮಹತ್ಯೆ ಯತ್ನ: ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರು

ಭಟ್ಕಳ: ತಾಲ್ಲೂಕಿನ ಸಾಗರ ರಸ್ತೆಯಲ್ಲಿರುವ ನಿರ್ಮಾಣ ಹಂತದ ಪುರಭವನದಿಂದ  ಗೃಹಿಣಿಯೋರ್ವಳು  ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿಯನ್ನು ಅರಣ್ಯ ಇಲಾಖೆ ಗಾರ್ಡ್ ಓರ್ವರ  ಪತ್ನಿ ಎಂದು ತಿಳಿದುಬಂದಿದೆ. ಪತಿ ಪತ್ನಿ ಇಬ್ಬರು ಬೆಳಗಾವಿ ಮೂಲದವರಾಗಿದ್ದರೆ.

ಇವರು ಶನಿವಾರದಂದು ತಾಲ್ಲೂಕಿನಲ್ಲಿ ಖಾಸಗಿ ಆಸ್ಪತ್ರೆಗೆ  ಪತಿಯೊಂದಿಗೆ ಚಿಕಿತ್ಸೆಗೆಂದು ಬಂದ ಸಂದರ್ಭದಲ್ಲಿ ಪತಿ ಔಷಧಿ ತೆಗೆದುಕೊಳ್ಳುವ ವೇಳೆ ಆಸ್ಪತ್ರೆಯ ಹೊರಗಡೆ ಫೋನ್ ನಲ್ಲಿ ಮಾತನಾಡುತ್ತಿದ್ದ ಪತ್ನಿ ಏಕಾಏಕಿ ನಾಪತ್ತೆಯಾಗಿದ್ದನ್ನು ಕಂಡು ಪತ್ನಿ ಹುಡುಕಾಟದಲ್ಲಿದ್ದ  ವೇಳೆ ಮಹಿಳೆ ಸಾಗರ ರಸ್ತೆಯ ಸಮೀಪದ ನಿರ್ಮಾಣ ಹಂತದಲ್ಲಿರುವ ಪುರಸಭೆ ಪುರಭವನದ ಕಟ್ಟಡವೇರಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಈ ವೇಳೆ ಅಲ್ಲಿನ ಸ್ಥಳೀಯರು ಆಟೊರಿಕ್ಷಾ ಚಾಲಕರು ಆ ಮಹಿಳೆಯನ್ನು ತಕ್ಷಣಕ್ಕೆ ಅಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಪತ್ನಿಯ ಹುಡುಕಾಟದಲ್ಲಿದ್ದ ಪತಿ, ಪತ್ನಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪತಿ ಪತ್ನಿಯ ಸ್ಥಿತಿಯನ್ನು ಕಂಡು ಮರುಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪಿ.ಎಸ್.ಐ ಸುಮಾ ಹಾಗೂ ಎ.ಎಸ್.ಐ ಗೋಪಾಲ ನಾಯ್ಕ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಕುರಿತು ಅರಣ್ಯ ಇಲಾಖೆ ಆರ್.ಎಫ್.ಓ ಸವಿತಾ ದೇವಾಡಿಗ ಅವರಿಗೆ ಮಾಹಿತಿ ತಿಳಿದು ಆಸ್ಪತ್ರೆಗೆ ಧಾವಿಸಿ ಗೃಹಿಣಿ  ಸ್ಥಿತಿಯನ್ನು ಪರಿಶೀಲಿಸಿದ್ದಾರೆ.ಬಳಿಕ ಆಕೆಯನ್ನು ಸಂತೈಸಿಸಿ ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ  ರವಾನಿಸಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button