Follow Us On

WhatsApp Group
Important
Trending

ಕೋವಿಡ್ ಕೇಸ್ ದೃಢ: ಈ ಎರಡು ಕಾಲೇಜಿಗೆ ಒಂದು ವಾರ ರಜೆ ಘೋಷಣೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಈ ಕಾಲೇಜಿನ ವಿದ್ಯಾರ್ಥಿಗಳಲ್ಲಿ ದಿನಾಂಕ: 24-01-
2022 ರಂದು ಕೋವಿಡ್ ಪರೀಕ್ಷಾ ವರದಿಯಂತೆ ಕೋವಿಡ್ ಸೋಂಕಿನ ಪ್ರಕರಣಗಳು ಕಂಡು
ಬಂದಿದೆ.

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕೊವಿಡ್-19 ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರಕಲಂ 26 ಮತ್ತು 34 ರಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ತಮಗಿರುವ ಅಧಿಕಾರವನ್ನು ಉಲ್ಲೇಖ (4) ರ ಪತ್ರದಂತೆ ಸಹಾಯಕ ಆಯುಕ್ತರುಗಳಿಗೆ ಪ್ರತ್ಯಾಯೋಜನೆ ಮಾಡಿ ಆದೇಶಸಿದ್ದಾರೆ.

ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 17 ಕೋವಿಡ್ ಕೇಸ್ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿಯಲ್ಲಿ 8 ಪ್ರಕರಣ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ದಿನಾಂಕ: 24-01-2022 ರಿಂದ 30-01-2022 ರ ವರೆಗೆ ರಜೆ ಘೋಷಿಸಿ ಆದೇಶ ಮಾಡಲಾಗಿದೆ.

ವಿಸ್ಮಯ ನ್ಯೂಸ್ ಕುಮಟಾ

Back to top button