Follow Us On

WhatsApp Group
Important
Trending

ಭಾರೀ ಅಲೆಗೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ: ಮೋಜು ಮಸ್ತಿಗೆ ಬಂದು ಮೈಮರೆಯುತ್ತಿದ್ದಾರೆ ಪ್ರವಾಸಿಗರು

ಕುಮಟಾ: ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಗೋಕರ್ಣ ಮುಖ್ಯ ಕಡಲತೀರದಲ್ಲಿ ನಡೆದಿದೆ. ಕೋವಿಡ್ ಕೋವಿಡ್ ನಿಯಮ ಬದಲಾಗುತ್ತಿರುವಂತೆ ಮತ್ತೆ ಕಡಲತೀರಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವೇಳೆ ಮೋಜ್ತಿಯಲ್ಲಿ ನೀರಿನಲ್ಲಿನ ಆಟವಾಡುತ್ತಾ ಮೈಮರೆತು ಜೀವಾಪಾಯ ತಂದುಕೊಳ್ಳುತ್ತಿದ್ದಾರೆ.

ಧಾರಡವಾಡದ ಕಲಘಟಗಿಯ ಒಂದೇ ಕುಟುಂಬದ ಆರು ಮಂದಿ ಆಗಮಿಸಿದ್ದು, ಪ್ರವಾಸಿಗರು, ಸಮುದ್ರದಲ್ಲಿ ಈಜಾಡಲು ತೆರಳಿದ್ದಾರೆ. ಈ ವೇಳೆ ಓರ್ವ ಭಾರೀ ಅಲೆಗೆ ಕೊಚ್ಚಿಹೋಗುತ್ತಿರುವುದನ್ನು ಕರ್ತವ್ಯನಿರತ ಲೈಫ್ ಗಾರ್ಡ್ ಸಿಬ್ಬಂದಿ ಗಮನಿಸಿದ್ದು, ತಕ್ಷಣ ರಕ್ಷಣೆಗೆ ಧಾವಿಸಿ ಅಪಾಯದಿಂದ ಪಾರುಮಾಡಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button