Important
Trending

ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ: ಆರೋಪಿ ಬಂಧನ

ಸಿದ್ದಾಪುರ: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಾಹನ, ಮೊಬೈಲ್ ಮತ್ತು ಮದ್ಯದ ಟೆಟ್ರಾಪ್ಯಾಕ್ ಗಳನ್ನು ಜಪ್ತುಪಡಿಸಿ, ಆರೋಪಿಯನ್ನು ದಸ್ತಗಿರಿ ಮಾಡಿದ ಘಟನೆ ತಾಲೂಕಿನ ಹೆಗ್ಗರಣಿ- ಕರ್ಕಿಹಕ್ಕಲು ರಸ್ತೆಯಲ್ಲಿ , ಇರುವ ಹುಲ್ಳುಂಡೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೇಟಿನ ಮುಂಭಾಗದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಪ್ರಸನ್ನ ಹನುಮ ಮಡಿವಾಳ ವಾಸ:- ನೆಟ್ಟಗಾರ, ಪೋ:-ಮಣಿಗಾರ ತಾ:-ಸಿದ್ದಾಪುರ ಎನ್ನುವವನು ತನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ನೋಂದಣಿ ಸಂಖ್ಯೆ ಕೆ.ಎ.31-L-9728 ರಲ್ಲಿ ಒರಿಜಿನಲ್ ಚಾಯ್ಸ್ ವಿಸ್ಕಿಯ 90 ಎಮ್. ಎಲ್.ನ 48 ಟೆಟ್ರಾಪ್ಯಾಕ್ ಗಳು ಹಾಗೂ ಓಲ್ಡ್ ಟವರಿನ್ ವಿಸ್ಕಿಯ 180 ಎಮ.ಎಲ್. ನ 7 ಟೆಟ್ರಾಪ್ಯಾಕ್ ಗಳನ್ನು ಸಾಗಿಸುತ್ತಿದ್ದಾಗ ದಾಳಿ ನಡೆಸಲಾಗಿದೆ.

ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ತಾಲೂಕಿನ ನಿಲ್ಕುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಕ್ರಮ ವಹಿಸಿದ್ದರು.

ಈ ದಾಳಿಯನ್ನು ವನಜಾಕ್ಷಿ ಎಮ್.ಅಬಕಾರಿ ಉಪ-ಆಯುಕ್ತರು ಕಾರವಾರ ರವರ ನಿರ್ದೇಶನದಂತೆ, ಮಹೇಂದ್ರ ಎಸ್. ನಾಯ್ಕ ಅಬಕಾರಿ ನಿರೀಕ್ಷಕರು ಉಪವಿಭಾಗ ಶಿರಸಿ ಇವರು ಮೊಕದ್ದಮೆಯನ್ನು ದಾಖಲಿಸಿದ್ದು, ದಾಳಿಯಲ್ಲಿ ಸಿಬ್ಬಂದಿಗಳಾದ ಎನ್.ಕೆ ವೈದ್ಯ, ಗಜಾನನ ಎಸ್.ನಾಯ್ಕ,ಈರಣ್ಣ ಗಾಳಿ ಹಾಗೂ ಅಬ್ದುಲ್ ಮಕಾನದಾರ ಇವರು ಪಾಲ್ಗೊಂಡಿದ್ದರು.

ವಿಸ್ಮಯ‌ ನ್ಯೂಸ್ , ದಿವಾಕರ್ ಸಂಪಖಂಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button