Follow Us On

WhatsApp Group
Focus News
Trending

ಹತ್ತಾರು ಬ್ರ್ಯಾಂಡ್ ಗಳ ಮದ್ಯ ಅಕ್ರಮ ಸಾಗಾಟ ಹಾಗೂ ಮಾರಾಟ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ

ಅಂಕೋಲಾ: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕರ್ನಾಟಕ ರಾಜ್ಯದ ವಿವಿಧ ಬ್ಯಾಂಡುಗಳ ಮದ್ಯ ಸಾಗಿಸಿ, ಮಾರಾಟ ಮಾಡುತ್ತಿದ್ದ   ಮೂವರನ್ನು ವಶಕ್ಕೆ ಪಡೆದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಅಂಕೋಲಾ  ತಾಲೂಕಿನ ಹಟ್ಟಿಕೇರಿ ಸಕಲಬೇಣ ನಿವಾಸಿಗಳಾದ ವಿನೋದ ಗೇನು ನಾಯ್ಕ (49), ಸಂತೋಷ ಗೇನು ನಾಯ್ಕ (41) ವಾಸುದೇವ ಗೇನು ನಾಯ್ಕ (51) ಬಂಧಿತ ಆರೋಪಿಗಳಾಗಿದ್ದು ಇವರಿಂದ 5500 ರೂಪಾಯಿ ನಗದು ಸೇರಿದಂತೆ  ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲೆತ್ನಿಸಿದ 650 ಎಂ.ಎಲ್ ನ ಕಿಂಗ್ ಪಿಶರ್ ಸ್ಟ್ರಾಂಗ್  5 ಬಾಟಲಿಗಳು, ಕಿಂಗ್ ಪಿಶರ್ ಪ್ರೀಮಿಯಂ 12 ಡಬ್ಬಿಗಳು, ಬೇಗ್ ಪೈಪರ್ ಡಿಲಕ್ಸ ವಿಸ್ಕಿ  180 ಎಂ.ಎಲ್ ನ 20 ಪ್ಯಾಕೇಟುಗಳು, ಒರಿಜಿನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್ ನ 50 ಪ್ಯಾಕೇಟುಗಳು, ಹೈವರ್ಡ್ಸ ಚಿಯರ್ ವಿಸ್ಕಿ 90 ಎಂ.ಎಲ್ ನ 60 ಪ್ಯಾಕೇಟುಗಳು, ಓಲ್ಡ್ ತೇವನ್ ವಿಸ್ಕಿ 180 ಎಂ.ಎಲ್ ನ 20 ಪ್ಯಾಕೇಟ್ ಸೇರಿದಂತೆ    ಸುಮಾರು 10299 ಮೌಲ್ಯದ ಸರಾಯಿ ವಶಪಡಿಸಿಕೊಳ್ಳಲಾಗಿದೆ.

ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಖಚಿತ ಮಾಹಿತಿ ಮತ್ತು ನಿರ್ದೇಶನದಂತೆ  ಅಂಕೋಲಾ  ಠಾಣೆಯ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ನೇತೃತ್ವಲ್ಲಿ ಸಿಬ್ಬಂದಿಗಳಾದ ರೋಹಿದಾಸ ದೇವಾಡಿಗ, ಜಗದೀಶ ನಾಯ್ಕ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಂಕೋಲಾದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಗೂಡಂಗಡಿಗಳು ಮತ್ತಿತರ ಚಿಕ್ಕಪುಟ್ಟ ವ್ಯಾಪಾರ ಸ್ಥಳಗಳೂ ಸೇರಿದಂತೆ ಇತರೆಡೆ ಇಂತಹ ಅಕ್ರಮ ಮದ್ಯ ಮಾರಾಟ ಪ್ರಕರಣ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಸಂಬಂಧಿಸಿದವರು ಈ ಕುರಿತು ಹೆಚ್ಚಿನ ಗಮನಹರಿಸಿ,ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆನ್ನುವ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಂತಿದೆ.               

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ನಾಯಕ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button