Follow Us On

WhatsApp Group
Important
Trending

ಕರಾವಳಿ ಕಾವಲು ಪಡೆ ಆವರಣಕ್ಕೆ ನುಗ್ಗಿದ ಕೆಂಪು ಕಾರ್ ? ಕ್ಷಣಕಾಲ ಆತಂಕ?

ಅಂಕೋಲಾ: ಜೋರಾಗಿ ಬಂದ ಕೆಂಪು ಕಾರೊಂದು ರಸ್ತೆ ಪಕ್ಕದ ಕಂಪೌಂಡಿಗೆ ಗುದ್ದಿ,  ಕರಾವಳಿ ಕಾವಲು ಪಡೆ ಕಛೇರಿ ಆವರಣಕ್ಕೆ ನುಗ್ಗಿದ ಘಟನೆ ಅಂಕೋಲಾ ತಾಲೂಕಿನ ಬೆಲೇಕೇರಿಯಲ್ಲಿ ಸೋಮವಾರ ಸಂಭವಿಸಿದೆ.  ಮುದಗಾ ಮೂಲದ ವ್ಯಕ್ತಿಗಳು ಇದ್ದರೆನ್ನಲಾದ ಈ ಕಾರು, ಬೆಲೇಕೇರಿ ಐಬಿ ಹತ್ತಿರದ ಮೈದಾನದ ಕಡೆಯಿಂದ  ರಸ್ತೆ ಕಡೆ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.

ಕೊಂಚ ಇಳಿಜಾರು, ಹೆಚ್ಚಿದ ಕಾರಿನ ವೇಗ, ಅಥವಾ ಬ್ರೇಕ್ ವೈಫಲ್ಯ ಇಲ್ಲವೇ ಇನ್ನಿತರ ಕಾರಣಗಳಿಂದ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ. ಬಂದರು ಇಲಾಖೆಗೆ  ಸಂಬಂಧಿಸಿದ್ದೆನ್ನಲಾದ ಕಂಪೌಂಡ್ ಗೋಡೆ, ಕರಾವಳಿ ಕಾವಲು ಪಡೆಯ ಸ್ಟೇಶನ್ ಗೆ ಹೊಂದಿಕೊಂಡಿದ್ದು, ಅತೀ ವೇಗದಿಂದ  ಕಾರು ಗುದ್ದಿದ ರಭಸಕ್ಕೆ ಕಂಪೌಂಡ್ ಗೋಡೆ ಭಾಗಶಃ ಹಾನಿಗೊಳಗಾಗಿದೆ.

ಕಾಂಪೌಂಡನ್ನು  ಸೀಳಿ ಒಳನುಗ್ಗಿದ  ಕಾರ್ ಕರಾವಳಿ ಕಾವಲು ಪಡೆಯ ಆವರಣದಲ್ಲಿ,ತನ್ನ  ಮೂತಿ ಚಚ್ಚಿಕೊಂಡು ಮುಂಬಾಗ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾವೇ ಅಪಘಾತ ಪಡಿಸಿದ ತಪ್ಪಿಗೆ ಕಂಪೌಂಡಿಗೆ ಆದ ಹಾನಿಯನ್ನು ಭರಿಸಿ ಕೊಡುವುದಾಗಿ  ತಿಳಿಸಿದ ಕಾರಿನವರು, ನಡೆದ ಆಕಸ್ಮಿಕ ಘಟನೆ ಕುರಿತು ಸಂಬಂಧಿಸಿದವರ ಬಳಿ ಮನವೊಲಿಸಿದರು ಎನ್ನಲಾಗಿದ್ದು, ಈ ಕುರಿತು ಯಾವುದೇ ರೀತಿಯ ಪೋಲೀಸ್ ದೂರು ದಾಖಲಾಗದೇ ಪರಸ್ಪರ ರಾಜಿ (ಹೊಂದಾಣಿಕೆ ) ಮೂಲಕ ಇತ್ಯರ್ಥ ಗೊಂಡಿದೆ ಎನ್ನಲಾಗಿದೆ.  

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button