ಮುಂಬೈಗೆ ಓಡಲು ಸಜ್ಜಾಗಿದ್ದರು
ಪೊಲೀಸರಿಗೆ ಬಂತು ಸಂಶಯ
ವಿಚಾರಿಸಿದಾಗ ಅಣ್ಣ ಎಂದಳು!
ಭಟ್ಕಳ: ಪಾಲಕರ ಕಣ್ತಪ್ಪಿಸಿ ಮುಂಬೈಗೆ ತೆರಳುಲು ಸಜ್ಜಾದ ಅಪ್ರಾಪ್ತ ಜೋಡಿಯೊಂದು ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದ ಮನೆಗೆ ಮರಳುವಂತಾದ ಘಟನೆ ರಾತ್ರಿ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.ತಾಲೂಕಿನ ಬೈಲೂರಿನ 16 ವರ್ಷದ ಬಾಲಕ, ಮುರ್ಡೇಶ್ವರದ 15 ಬಾಲಕಿ ಮುಂಬೈಗೆ ತೆರಳಲು ಸಜ್ಜಾಗಿದ್ದರು. ಈ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಬಾಲಕ ಅವರ ಮನೆಯಿಂದ ನಾಪತ್ತೆಯಾಗಿದ್ದಾನೆ. ನಂತರ ಮುಂಬೈಗೆ ತೆರಳಲು ಅಪ್ರಾಪ್ತರು ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಮುಂಬೈನ ರೈಲಿನ ಕುರಿತು ಮಾಹಿತಿ ಪಡೆದಿದ್ದಾರೆ ಈ ಅಪ್ರಾಪ್ತರ ಚಟುವಟಿಕೆಗಳನ್ನು ಗಮನಿಸುತ್ತಿದ್ದ ರೈಲ್ವೆ ಪೊಲೀಸರಿಗೆ ಹಾಗೂ ಅಲ್ಲಿಯೆ ಕರ್ತವ್ಯದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಇವರ ಮೇಲೆ ಅನುಮಾನ ಬಂದಿದೆ. ನಂತರ ಬಾಲಕಿಯ ಬಳಿ ತೆರಳಿ ವಿಚಾರಿಸಿದ್ದಾರೆ.
ಮೊದಲು ಬಾಲಕ ನಿನಗೆ ಎನಾಗಬೇಕು ಎಂದಾಗ ಅಣ್ಣನಾಗಬೇಕು ಎಂದು ತೊದಲುತ್ತಾ ಉತ್ತರಿಸಿದ್ದಳು. ಸಂಶಯಗೊಂಡ ಪೊಲೀಸರು ಪುನಃ ಕೇಳಿದಾಗ ತಾನು ಆತನನ್ನು ಪ್ರೇಮಿಸುತ್ತಿದ್ದು ಮನೆ ಬಿಟ್ಟು ಆತನ ಜೊತೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂತರ ರೈಲ್ವೆ ಪೊಲೀಸ್ ಅಧಿಕಾರಿ ಸಿಂಗ್ ಭಟ್ಕಳ ಶಹರಠಾಣೆಗೆ ಮಾಹಿತಿ ನೀಡಿ ಅಪ್ರಾಪ್ತರ ಪಾಲಕರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಪಾಲಕರ ಸಮ್ಮುಖದಲ್ಲಿ ಇಬ್ಬರಿಗೂ ಬುದ್ದಿವಾದ ಹೇಳಿ ಅವರವರ ಪಾಲಕರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದಿದ್ದರು ತಾಲೂಕಿನ ಯಾವುದೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ