Follow Us On

WhatsApp Group
Focus News
Trending

ಯಾಮಾಷ್ಟಕ ಭಜನೆ ಮತ್ತು ಶ್ರೀದೇವರ ಜನ್ಮೋತ್ಸವ: ಶ್ರೀ ಶಂಭುಲಿಂಗ ದೇವಾಲಯ ಕತಗಾಲ್, ಕುಮಟಾ

ಕತಗಾಲ: ಶ್ರೀ ಶಂಭುಲಿಂಗ ದೇವಾಲಯ ಕತಗಾಲ ಇವರ ವತಿಯಿಂದ ಇದೇ ಮಾರ್ಚ್ 7 ರ ಸೋಮವಾರದಿಂದ ಯಾಮಾಷ್ಟಕ ಭಜನೆ ಮತ್ತು ಶ್ರೀ ದೇವರ ಜನ್ಮೋತ್ಸವ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 7 ರಂದು ಬೆಳಿಗ್ಗೆ ಯಾಮಾಷ್ಟಕ ಭಜನೆ  ಪ್ರಾರಂಭಗೊಳ್ಳಲಿದ್ದು, ಮಾರ್ಚ್ 8 ರಂದು ಬೆಳಿಗ್ಗೆ ಯಾಮಾಷ್ಟಕ ಭಜನೆ ಮಂಗಲ, ಶ್ರೀ ದೇವರ ಅವಭೃತ ಸ್ನಾನ, ಶತರುದ್ರಾಭಿಷೇಕ, ಶ್ರೀ ಮಹಾಗಣಪತಿ ಅಥರ್ವಶೀರ್ಷ ಹವನ, ದುರ್ಗಾ ಹವನ, ರುದ್ರ ಹವನ, ಮಹಾಮಂಗಳಾರತಿ, ಮಧ್ಯಾಹ್ನ 1 ಘಂಟೆಯಿoದ 3 ಘಂಟೆಯವರೆಗೆ ಸಾರ್ವಜನಿಕರ ಅನ್ನಸಂತರ್ಪಣೆ ಕಾರ್ಯಕ್ರಮ, ಶ್ರೀ ದೇವರ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಪೂಜೆ, ಫಲಾವಳಿ ಸಾಮಾನುಗಳ ಬಹಿರಂಗ ಸವಾಲು, ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕೆಂದು ಶ್ರೀ ಶಂಭುಲಿಂಗ ದೇವಾಲಯ ಕತಗಾಲ ಇದರ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಕೋರಿದ್ದಾರೆ.

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button