ಶಿಕ್ಷಕರು ಶಿಶು ಪಾಲನಾ ರಜೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸಂಗತಿ ಗಮನಕ್ಕೆ ಬಂದಿದ್ದು,ಇದಕ್ಕೆ ಶೀಘ್ರವೇ ಕಡಿವಾಣ ಹಾಕುವ ಕಾನೂನುಜಾರಿಗೊಳಿಸಲಾಗುವುದು ಎಂದು ವಿಧಾನ ಪರಿಷತ್ಸದಸ್ಯಶಾಂತಾರಾಮ ಹೆಗಡೆ ಸಿದ್ದಿ ಹೇಳಿದರು.ತಾಲೂಕಿನ ಕಾನಮುಷ್ಠಿ ಸರ್ಕಾರಿ ಕಿರಿಯ ಪ್ರಾಥಮಿಕಶಾಲೆಯ ಅಮೃತ ಮಹೋತ್ಸವ ಉದ್ಘಾಟಿಸಿಮಾತನಾಡಿದರು.
ಸರ್ಕಾರದ ನಿಯಮದಂತೆ 16 ವರ್ಷದವರೆಗೂಮಕ್ಕಳನ್ನು ಶಿಶು ಎಂದೇ ಗುರುತಿಸುವುದರಿಂದ ಶಿಕ್ಷಕರುತಮಗೆ ಬೇಕಾದ ಸಮಯದಲ್ಲಿ ರಜೆ ಪಡೆಯುತ್ತಿರುವುದುಗಮನಕ್ಕೆ ಬಂದಿದೆ. ಇದು ಒಂದರ್ಥದಲ್ಲಿ ರಾಷ್ಟ್ರದ್ರೋಹಿಕೆಲಸವೇ ಆಗಿದ್ದು, ಇದನ್ನು ಗಂಭೀರವಾಗಿಪರಿಗಣಿಸಿ ಶೀಗ್ರದಲ್ಲಿ ಕಾನೂನು ತಿದ್ದುಪಡಿ ಮೂಲಕತಡೆಹಿಡಿಯುವುದಾಗಿ ತಿಳಿಸಿದರು.