ಪಂಚ ರಾಜ್ಯ ಚುನಾವಣೆ ಫಲಿತಾಂಶ: ಪಂಜಾಬ್ ಹೊರತುಪಡಿಸಿ ಉಳಿದೆಡೆ ಕಮಲಕ್ಕೆ ಸಿಹಿ ಕಜ್ಜಾಯ: ಅಂಕೋಲಾದಲ್ಲಿಯೂ ವಿಜಯೋತ್ಸಾಹ.
ಅಂಕೋಲಾ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು, ಭಾ.ಜ.ಪ ಅಂಕೋಲಾ ಘಟಕದ ಕಾರ್ಯಕರ್ತರು, ಗುರುವಾರ ಸಂಜೆ ಪಟ್ಟಣದ ಜೈ ಹಿಂದ್ ವೃತ್ತದ ಬಳಿ ಸೇರಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಹಿರಿಯ ಮುಖಂಡ ಭಾಸ್ಕರ ನಾರ್ವೇಕರ್ ಮಾತನಾಡಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ದೇಶದ ಜನತೆ ವಿಶ್ವಾಸ ಇಟ್ಟಿದೆ ಎನ್ನುವುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ, ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆಡಳಿತ ಮಾದರಿ ಎನಿಸಿ,ಎರಡನೇ ಬಾರಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಅವಿರತ ಪ್ರಯತ್ನಿಸಿದ್ದಾರೆ. ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಸಹ ಬಿಜೆಪಿ ಹೆಚ್ಚಿನ ಸ್ಥಾನವನ್ನು ಪಡೆದು ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದರು.
ಬಿಜೆಪಿ ಹಿಂದುಳಿದ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ವಿ ನಾಯ್ಕ ಅವರು ಮಾತನಾಡಿ ದೇಶದ ಮತ್ತು ಜನ ಸಾಮಾನ್ಯರ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಜನರು ಬಿಜೆಪಿ ಪರ ಮತ ಚಲಾಯಿಸುವ ಮೂಲಕ ತೋರಿಸಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ಮತದಾರರು ಅಭಿವೃದ್ಧಿಪರ ಮತ್ತು ಜನಪರ ಸರ್ಕಾರ ಬಯಸಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಭಾವಿಕೇರಿ, ಪುರಸಭೆ ನಾಮ ನಿರ್ದೇಶಿತ ಸದಸ್ಯ ನಾಗೇಶ ಕಿಣಿ, ಮುಖಂಡ ಚಂದ್ರಕಾಂತ ನಾಯ್ಕ ಬಬ್ರುವಾಡಮಾತನಾಡಿದರು.
ಮಂಡಲ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಪ್ರಮುಖರುಗಳಾದ ರಾಜಾ ಪೆಡ್ನೇಕರ, ಕೃಷ್ಣಕುಮಾರ ಮಹಾಲೆ, ದಾಮೋದರ ರಾಯ್ಕರ,ಅನುರಾಧಾ ನಾಯ್ಕ, ಸುಲಕ್ಷಾ ಭೋವಿ, ಸದಾನಂದ ನಾಯಕ, ಬಾಲಕೃಷ್ಣ ನಾಯ್ಕ, ಗಜೇಂದ್ರ ನಾಯ್ಕ, ಸಣ್ಣಪ್ಪಗೌಡ, ನಾಗರಾಜ ನಾಯ್ಕ,ಗಣಪತಿ ನಾಯ್ಕ ಹನುಮಟ್ಟಾ, ಸುಭಾಷ ನಾಯ್ಕ, ಸುಬ್ರಹ್ಯಣ್ಯ ರೇವಣಕರ, ಬಿಂದೇಶ ನಾಯಕ ಹಿಚ್ಕಡ, ಚಂದ್ರಕಾಂತ ಪೀರನಕರ, ತಾರಾ ನಾಯ್ಕ, ಶ್ರೀಧರ ನಾಯ್ಕ, ನವೀನ ತಾಂಡೇಲ, ಇತರರಿದ್ದರು.ಇತ್ತೀಚೆಗಷ್ಟೇ ಪಕ್ಷ ತೊರೆದಿದ್ದ ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜನಾಥ ವಿ ನಾಯ್ಕ,ಬಿಜೆಪಿ ಪಕ್ಷದ ವಿಜಯೋತ್ಸವದಲ್ಲಿ ನೇರವಾಗಿ ಪಾಲ್ಗೊಂಡು, ಕೇಸರಿ ಪಡೆಯತ್ತ ತನ್ನ ಒಲವು ತೋರಿದಂತಿತ್ತು. ಕಾಂಗ್ರೆಸ್ ಸಹ ರಾಜಕೀಯದಲ್ಲಿ ಇವೆಲ್ಲಾ ಮಾಮೂಲು ಎಂಬಂತೆ ಯುವ ಕಾಂಗ್ರೆಸ್ಸಿಗೆ ಈಗಾಗಲೇ ಜೀವನ ನಾಯಕ ಎನ್ನುವ ಯುವಕನನ್ನು ನೇಮಿಸಿಕೊಂಡು,ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ