Follow Us On

WhatsApp Group
Important
Trending

ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆ ? ವರ್ಷ ತುಂಬುವ ಮೊದಲೇ ಅಭಿವೃದ್ಧಿ ಯೋಜನೆ – ಯೋಚನೆಗಳಿಗೆ ಹಿನ್ನಡೆಯಾಗಿದ್ದು ಏಕೆ ?      

ಅಂಕೋಲಾ : ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ  ಅಂಕೋಲಾದಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಶೀಘ್ರದಲ್ಲಿ ತಿಳಿದು ಬರುವ ಸಾಧ್ಯತೆ ಇದೆ. ಕಳೆದ ಜುಲೈನಲ್ಲಿ ಅಂಕೋಲಾದ ಮೂಲಕ  ಅತ್ತಿ ಜೀವನದ ಮೊದಲ ಸೇವೆ ಆರಂಭಿಸಿದ್ದ ಗಾಯಕವಾಡ ಗ್ರೇಡ್ 1 ಚೀಫ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದರು.

ಎಮ್. ಎ ಎಸ್ ಮುಗಿಸಿರುವ ಈ ಯುವ ಮಹಿಳಾ ಅಧಿಕಾರಿ, ಹಲವು ಕನಸುಗಳೊಂದಿಗೆ ಅಂಕೋಲಾ ಪುರಸಭೆಯಲ್ಲಿ ಅಭಿವೃದ್ಧಿ ಚಿಂತನೆ ಹೊಂದಿದ್ದರಾದರೂ, ಕೊವಿಡ್ ಸಂದಿಗ್ದ ಕಾಲ, ಕೆಲ ಜನಪ್ರತಿನಿದಿಗಳಿಂದ ದೊರೆಯದ ನಿರೀಕ್ಷಿತ ಪ್ರಮಾಣದ ಸಹಕಾರ, ಪುರಸಭೆಯ ಇತ್ತೀಚಿನ ಕೆಲ ಹಸಿ-ಬಿಸಿ ಬೆಳವಣಿಗಳಿಂದ ಅಭಿವೃದ್ಧಿ ಯೋಚನೆ ಮತ್ತು ಯೋಜನೆಗಳಿಗೆ ಕೊಂಚ ಹಿನ್ನಡೆ ಕಾಣುವಂತಾಯಿತು ಎನ್ನಲಾಗಿದೆ. ಅಧಿಕಾರ ವಹಿಸಿಕೊಂಡ ಒಂದು ವರ್ಷಕ್ಕೂ ಮೊದಲೇ (9 ತಿಂಗಳಲ್ಲಿಯೇ ) ಅವರು ಅಂಕೋಲಾದಿಂದ ವರ್ಗಾವಣೆ ಗೊಳ್ಳುವಂತಾಗಿರುವುದು ಸಾರ್ವಜನಿಕ ವಲಯದಲ್ಲಿ ನಾನಾ ಚರ್ಚೆಗೆ ಕಾರಣವಾದಂತಿದೆ.

ಇಲ್ಲಿಯ ಒಳ ವ್ಯವಸ್ಥೆ ಸರಿಪಡಿಸಲಾಗದ ಬೇಸರದಿಂದ ಇವರೇ ಕೋರಿಕೆ ವರ್ಗಾವಣೆಗೆ ಮುಂದಾದರೇ, ಅಥವಾ  ಆಡಳಿತಾತ್ಮಕ ಸಹಜ ವರ್ಗಾವಣೆ ಇರಬಹುದೇ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಇವರು ಅಂಕೋಲಾದಿಂದ ಬೆಂಗಳೂರಿನ (ಕೆ.ಯು.ಐ. ಡಿ. ಎಫ್ ಸಿ ) ಗೆ ವರ್ಗಾವಣೆಗೊಂಡಿದ್ದಾರೆ, ಈ ಕುರಿತು ಆದೇಶವೂ ಆಗಿದೆ ಎನ್ನಲಾಗುತ್ತಿದೆ.  ಆಡಳಿತಾತ್ಮಕವಾಗಿ ತೊಂದರೆ ಆಗದಂತೆ ಮಾರ್ಚ (ವಾರ್ಷಿಕ ) ಅಂತ್ಯದ ನಂತರ ಇವರು ವರ್ಗಾವಣೆಗೊಳ್ಳಬಹುದು ಎಂಬ ಮಾತು ಒಂದು ಕಡೆಯಿಂದ ಕೇಳಿ ಬರುತ್ತಿದ್ದರೆ, ಇನ್ನೊಂದೆಡೆಯಿಂದ ವರ್ಗಾವಣೆ ಕುರಿತು ನಿಖರ ದಿನವನ್ನು ಗೊತ್ತುಪಡಿಸಲಾಗದು .

ಪುರಸಭೆಯ ಇತ್ತೀಚಿನ ಕೆಲ ಪ್ರಮುಖ ಬೆಳವಣಿಗೆ  ಕಾರಣಗಳು ವರ್ಗಾ’ವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ಮಾತು ಕೇಳಿ ಬಂದಂತಿದೆ. ಒಟ್ಟಿನಲ್ಲಿ ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ಪುರಸಭೆ, ಮುಖ್ಯಾಧಿಕಾರಿ ವರ್ಗಾವಣೆ ಮೂಲಕ ಮತ್ತೆ ಸುದ್ದಿಯಾಗುತ್ತಿದೆ., ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಹೊಸ ಕಟ್ಟಡದ ತಮ್ಮ  ಕಾರ್ಯಾಲಯದಲ್ಲಿ  ಮುಖ್ಯಾಧಿಕಾರಿಗಳು ಎಷ್ಟು ದಿನ ಆಡಳಿತ ನಡೆಸಬಹುದು ಇಲ್ಲವೇ ಇವರಿಗೆ ಒಂದೊಮ್ಮೆ ಅತೀ ಶೀಘ್ರದಲ್ಲಿ ವರ್ಗಾವಣೆಯಾದರೆ, ಇವರ ಖುರ್ಚಿ ಮೇಲೆ ಬಂದು ಕುಳ್ಳುವವರು ಯಾರು ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿದೆ. ಈ ಕುರಿತು ಸ್ಪಷ್ಟ ಮಾಹಿತಿಗಳು ತಿಳಿದು ಬರಬೇಕಿದೆ.                       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button