Focus News
Trending

ಅಂಕೋಲಾದಲ್ಲಿ ಮತ್ತೆ ದಾಖಲಾದ ಓಸಿ ಪ್ರಕರಣ : ಕೋಳಿ ಅಂಕದ ಮೇಲೆಯೂ ಪೊಲೀಸರ ದಾಳಿ 

ಅಂಕೋಲಾ:  ಎಸ್ಪಿ ಡಾ. ಸುಮನ ಪನ್ನೇಕರ ಮಾರ್ಗದರ್ಶನದಲ್ಲಿ ಅಂಕೋಲಾ ತಾಲೂಕಿನಲ್ಲಿ  ಅಕ್ರಮ ಚಟುವಟಿಕೆಗಳನ್ನು ತಡೆಯಲು ಅಂಕೋಲಾ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು ಕಳೆದ ಎರಡು ದಿನಗಳಲ್ಲಿ ಮಟಕಾ ಮತ್ತು ಕೋಳಿ ಪಡೆ ಮೇಲೆ ದಾಳಿ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. 

(ಓ ಸಿ) ಮಟಕಾ ಜುಗಾರಾಟಕ್ಕೆ ಸಂಬಂಧಿಸಿದಂತೆ ಪಟ್ಟಣ ವ್ಯಾಪ್ತಿಯ ಮಂಜುಗುಣಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ರೆಹಮಾನಿಯಾ ಕ್ರಾಸ್ ಬಸ್ ತಂಗುದಾಣದ ಬಳಿ  ಮಟಕಾ ಓ.ಸಿ ನಂಬರ್ ಬರೆಯುತ್ತಾ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಪೊಲೀಸರು ದಾಳಿ ನಡೆಸಿ ಬೊಬ್ರವಾಡ ಪಳ್ಳಿಕೇರಿ ನಿವಾಸಿ ಚಂದ್ರಕಾಂತ ಟಿ ನಾಯ್ಕ (55) ಎಂಬಾತನಿಂದ 860 ರೂಪಾಯಿ ಹಣ ಮತ್ತು ಮಟಕಾ ಬರೆಯುವ ಪರಿಕರಗಳನ್ನು ವಶಪಡಿಸಿಕೊಂಡಿದ್ದು ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮುಟಕಾದಿಂದ  ಸಂಗ್ರಹವಾದ ಹಣವನ್ನು ಆತ  ಕೇಣಿ ನಿವಾಸಿ ಸಂದೀಪ ಜಿ ಬಂಟ ಎಂಬಾತನಿಗೆ ನೀಡುತ್ತಿದ್ದ ಎನ್ನಲಾಗಿದ್ದು , ಓಸಿ ಬುಕ್ಕಿಯೆನಿಸಿಕೊಂಡ ಆರೋಪಿತನ  ಮೇಲೆಯೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಬೇರೆ ದಿನ ನಡೆದ ಪ್ರತ್ಯೇಕ ಪ್ರಕರಣವೊಂದರಲ್ಲಿ ತಾಲೂಕಿನ ಬೊಬ್ರವಾಡದ ಬೊಬ್ರದೇವಸ್ಥಾನದ  ಹಿಂದುಗಡೆ ಕಾನೂನು ಬಾಹಿರವಾಗಿ ಪಂಥ ಕಟ್ಟಿ ನಡೆಸಲಾಗುತ್ತಿದ್ದ ಕೋಳಿ ಪಡೆ ಮೇಲೆ ದಾಳಿ ನಡೆಸಿದ ಪೊಲೀಸರು , ಕೋಳಿ ಅಂಕದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜಗದೀಶ, ನೀಲಕಂಠ, ಉಮಾಕಾಂತ,ಸುಧಾಕರ, ಮಾರುತಿ ಎನ್ನುವ 5 ಜನರ ಮೇಲೆ ಪ್ರಕರಣ ದಾಖಲಿಸಿ,5960 ರೂಪಾಯಿ ನಗದು ಮತ್ತು 5 ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.             

ಪೊಲೀಸ್ ಇಲಾಖೆಯ ಹಲವು ಬಿಗಿಕ್ರಮಗಳ ನಡುವೆಯೂ,ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಆಗಾಗ ಪತ್ತೆಯಾಗುತ್ತಲೇ ಇದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button