Follow Us On

WhatsApp Group
Important
Trending

ಮನೆಯ ಮುಂದೆ ಇಟ್ಟಿದ್ದ ಕೋಳಿ ಬಾಕ್ಸ್ ಗಳ ಕಳ್ಳತನ: ಮೂವರು ಆರೋಪಿಗಳ ಬಂಧನ

ಕುಮಟಾ: ಪಟ್ಟಣದ ಉಪ್ಪಾರಕೇರಿ ಹಾಗೂ ಭಟ್ಕಳ ಸರ್ಪನಕಟ್ಟೆಯಿಂದ ಕೋಳಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿತರನ್ನು ಪೊಲೀಸರು ಬಂಧಿಸಿದ್ದು, ಕದ್ದ ಕೋಳಿಗಳ ಬಾಕ್ಸ್ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನವಾಗಿದ್ದ 31 ಕೋಳಿ ಬಾಕ್ಸ್ಗಳ ಜೊತೆಗೆ ಕಳ್ಳತನಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ ಹಾಗೂ ಸರ್ಪನಕಟ್ಟೆಯಲ್ಲಿ ಕಳ್ಳತನವಾಗಿದ್ದ 30 ಕೋಳಿ ತುಂಬುವ ಪೈಬರ್ ಬಾಕ್ಸ್ ಹೀಗೆ ಒಟ್ಟು 3.34,000 ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ತಾಲೂಕಿನ ಉಪ್ಪಾರಕೇರಿಯ ಬಾಡಿಗೆ ಮನೆಯೊಂದರ ಎದುರು ರಸ್ತೆಯ ಪಕ್ಕದಲ್ಲಿ ಇಟ್ಟಿದ್ದ 31 ಕೋಳಿ ಬಾಕ್ಸಗಳನ್ನು ಸುಮಾರು ಒಂದು ತಿಂಗಳ ಹಿಂದೆ ಕಳ್ಳತನ ಮಾಡಿದ್ದರು. ಯಲ್ಲಾಪುರ ಉದ್ಯಮನಗರದ, ಹಾಲಿ ಹಳೆಹುಬ್ಬಳ್ಳಿ ನಿವಾಸಿ ಶೇಖ್ ಜಾಫರ್ ಶೇಖ್ ರುಸ್ತುಂ, ಯಲ್ಲಾಪುರ ಕಾಳಮ್ಮನಗರದ, ಹಾಲಿ ಹಳೆ ಹುಬ್ಬಳ್ಳಿ ಜಂಗ್ಲಿ ಪೇಟೆ ನಿವಾಸಿ ಸಯ್ಯದ ರುಸ್ತುಮ್ ಶೇಖ್ ಹಾಗೂ ಹಳೆಹುಬ್ಬಳ್ಳಿಯ, ಹಾಲಿ ಹಳೆ ಹುಬ್ಬಳ್ಳಿ ಕುಂದಗೋಳ ಕ್ರಾಸ್ ನಿವಾಸಿ ಜಾವೇದಖಾನ್ ಲಿಯಾPತ್ ಅಲಿಖಾನ್ ಕಡೂರ ಬಂಧಿತ ಆರೋಪಿಗಳು.

ವಿಸ್ಮಯ ನ್ಯೂಸ್, ಕುಮಟಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button