Focus News
Trending

ಹೊನ್ನಾವರ ಯುವ ಕಾಂಗ್ರೆಸ್ ವತಿಯಿಂದ ಹುತಾತ್ಮರ ದಿನಾಚರಣೆ

ಹೊನ್ನಾವರ ತಾಲೂಕಾ ಯುವ ಕಾಂಗ್ರೆಸ್ ವತಿಯಿಂದ ಕಡತೋಕಾ ದಲ್ಲಿ ಹುತಾತ್ಮರ ದಿನಾಚರಣೆಯನ್ನು ನಡೆಸಲಾಯಿತು. ಕಡತೋಕಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಭಾವಚಿತ್ರ ಮತ್ತು ಪುಸ್ತಕವನ್ನು ಯುವ ಕಾಂಗ್ರೇಸ್ಸಿಗರು ವಿತರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟ ನಡೆಸಿದ ಭಗತ್ ಸಿಂಗ್ , ರಾಜಗುರು, ಸುಖದೇವ ಮೊದಲಾದ ಭಾರತೀಯ ವೀರ ಪುತ್ರರ ತ್ಯಾಗ ಬಲಿದಾನವನ್ನು ಸ್ಮರಿಸಿ ಯುವ ಕಾಂಗ್ರೆಸ್ ಮಕ್ಕಳಲ್ಲಿ ಈಗಿನಿಂದಲೇ ದೇಶಪ್ರೇಮವನ್ನು ಉದ್ದೀಪನಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.

ರಾಜ್ಯಾದ್ಯಂತ ಯುವ ಕಾಂಗ್ರೆಸ್ ಹುತಾತ್ಮರ ದಿನಾಚರಣೆ ನಡೆಸುತ್ತಿದ್ದು ಭಗತ್ ಸಿಂಗರ ದೇಶಪ್ರೇಮ, ಅವರ ಹೋರಾಟದ ವಿವಿಧ ಮಜಲುಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಅವರ ಭಾವಚಿತ್ರ ಮತ್ತು ಪುಸ್ತಕವನ್ನು ವಿತರಿಸಲಾಗುತ್ತಿದೆ ಎಂದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಇಂದಿನ ದಿನಗಳಲ್ಲಿ ದೇಶಾದ್ಯಂತ ವಿವಿಧ ಜಾತಿ ಧರ್ಮಗಳಲ್ಲಿ ಪರಸ್ಪರ ನಂಬಿಕೆ- ವಿಶ್ವಾಸಗಳ ಕೊರತೆ ಕಂಡುಬರುತ್ತಿದೆ. ದೇಶ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ಅತ್ಯಂತ ಪ್ರಮುಖವಾಗಿದ್ದು ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವಲ್ಲಿ ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.

ಮಕ್ಕಳಲ್ಲಿ ಸ್ವಚ್ಛತೆ, ಶಿಸ್ತು,ಉತ್ತಮ ಸಂಸ್ಕ್ರತಿ ಇವುಗಳನ್ನು ಬೆಳೆಸುವ ಕಾರ್ಯವನ್ನು ಮಾಡಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು. ಭಗತ್ ಸಿಂಗ್ ರವರು ತಮ್ಮ ಬಾಲ್ಯದಿಂದಲೇ ರಾಷ್ಟ್ರದ ಬಗ್ಗೆ ಅಪಾರ ಪ್ರೇಮದಿಂದ ಬ್ರಿಟೀಶರ ವಿರುದ್ಧ ಹೋರಾಟ ಮಾಡಿ ತಮ್ಮ 23 ನೆಯ ವಯಸ್ಸಿನಲ್ಲಿಯೇ ನೇಣಿಗೇರಿಸಲ್ಪಟ್ಟರು. ಇಂತಹ ಕ್ರಾಂತಿಕಾರಿ ನಾಯಕರ ಹೋರಾಟ ಈ ದೇಶದ ಯುವಕರಿಗೆ ಸ್ಪೂರ್ತಿಯಾಗಬೇಕಿದೆ ಎಂದರು.    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾ.ಪಂ ಸದಸ್ಯ ರಾಮಚಂದ್ರ ನಾಯ್ಕ, ಕಾಂಗ್ರೆಸ್ ಮುಖಂಡ ಶ್ರೀನಾಥ ಶೆಟ್ಟಿ, ವಿ.ಎಂ.ಸಿ ಅಧ್ಯಕ್ಷ ಎಲ್ .ಎನ್ ಭಟ್ಟ ಮಾತನಾಡಿದರು. ರವಿ ಪಟಗಾರ ಮಾಡಗೇರಿ ಇವರು ಸ್ವಾಗತಿಸಿ ವಂದಿಸಿದರು.

ಹಿರಿಯ ಕಾಂಗ್ರೇಸ್ಸಿಗ ಅಣ್ಣಪ್ಪ ಹೆಗಡೆ ,ಗ್ರಾ .ಪಂ ಸದಸ್ಯೆ ನೇತ್ರಾವತಿ ಮುಕ್ರಿ, ರಾಜು ನಾಯ್ಕ,ರಾಜೇಶ ಶೆಟ್ಟಿ,ಸಚಿನ್ ನಾಯ್ಕ,ಶಶಾಂಕ ನಾಯ್ಕ ಇನ್ನಿತರರು ಹಾಜರಿದ್ದರು.

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button