Important

ಹೊಳೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು: ಶವ ಹೊರತೆಗೆದ ಈಜುಗಾರರು

ಶಿರಸಿ: ಹೊಳೆಯಲ್ಲಿ ಕಾಲು ಜಾರಿ ಬಿದ್ದ ವ್ಯಕ್ತಿಯ ಶವವನ್ನು ಈಜುಗಾರರ ಸಹಾಯದಿಂದ ಹೊರ ತೆಗೆದ ಘಟನೆ ಇಲ್ಲಿನ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಔಡಾಳ ಗ್ರಾಮದ ಮೊಗದ್ದೆಯಲ್ಲಿ ನಡೆದಿದೆ. ಚಂದ್ರಶೇಖರ ಪೂಜಾರಿ ಎಂಬಾತ ಕಾಲು ಜಾರಿ ಬಿದ್ದು, ಮುಳುಗಿ ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.

ಶಿರಸಿಯ ಖ್ಯಾತ ಈಜುಗಾರರಾದ ಗೋಪಾಲ ಗೌಡ, ಆನಂದ ಕಬೈ, ರವರು ನಾಗೇಶ್ ಕಬೈ, ಅನಂತ ಗೌಡ, ಕೆರಿಯ ಶಿವು ಗೌಡ, ನೀತು ಗೌಡ, ಗೋಪಿ, ಶಿರಿ ನಾಯ್ಕ, ಸಾಧು ಗೌಡ, ರಾಘು ಗೌಳಿಯವರ ಸಹಾಯದಿಂದ ಹೊಳೆಯಿಂದ ಶವವನ್ನು ಹೊರಗೆ ತೆಗೆಯಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button