ಭಟ್ಕಳ- ಸನಾತನ ಹಿಂದು ಧರ್ಮದಲ್ಲಿ ಭಜನೆಗೆ ಅಗ್ರಮಾನ್ಯ ಸ್ಥಾನವಿದೆ. ಎಲ್ಲಿ ನಿರಂತರವಾಗಿ ಭಜನೆ ನಡೆಯುತ್ತದೆಯೋ ಅಲ್ಲಿ ಅಲ್ಲಿ ಭಗವಂತನ ಸಾನಿದ್ಯವನ್ನು ಕಾಣಬಹುದಾಗಿದೆ.ಅಲ್ಲಿ ಒಂದು ರೀತಿಯ ಸಕಾರಾತ್ಮಕತೆ ತಾನಾಗಿಯೇ ಪ್ರವಹಿಸುತ್ತವೆ.ಅಲ್ಲಿನ ಮಕ್ಕಳಲ್ಲಿ ಸಂಸ್ಕಾರ ಜಾಗೃತಗೊಳ್ಳುತ್ತದೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನುಡಿದರು.
ಅವರು ಸಾರದಹೊಳೆ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಭವ್ಯ ವೇದಿಕೆಯಲ್ಲಿ ಹನುಮಂತನ ಕುರಿತು ಕವಿ ಲೇಖಕ ಪ್ರಕಾಶಕ ಉಮೇಶ ಮುಂಡಳ್ಳಿ ಸಂಪಾದಕತ್ವದಲ್ಲಿ ಪ್ರಕಟವಾದ ಹನುಮಾಮೃತ ಎಂಬ ಭಕ್ತಿಗೀತೆ ಪುಸ್ತಕ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ವೇದಿಕೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ್ ವೈದ್ಯ, ಧರ್ಮದರ್ಶಿ ಸುಬ್ರಾಯ ಜೆ ನಾಯ್ಕ, ನಾಮಧಾರಿ ಅಭಿವೃದ್ದಿ ಸಂಘದ ಅಧ್ಯಕ್ಷ ಸುಬ್ರಾಯ ಎಂ.ನಾಯ್ಕ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಕಾರ್ಯದರ್ಶಿ ಜೆ.ಜೆ.ನಾಯ್ಕ , ಗೀತ ರಚನೆಕಾರ ನಂದನ ನಾಯ್ಕ, ಶಿರಾಲಿ ಗ್ರಾಪಂ ಸದಸ್ಯ ವೆಂಕಟೇಶ ನಾಯ್ಕ, ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಂದನ ನಾಯ್ಕ, ಉಮೇಶ ಮುಂಡಳ್ಳಿ, ಶ್ರೀಧರ ಶೇಟ್, ರಾಜು ನಾಯ್ಕ ಚಿತ್ರಾಪುರ,ರೇಷ್ಮಾ ಉಮೇಶ, ಪರಮೇಶ್ವರ ನಾಯ್ಕ,ಕೃಷ್ಣ ಮೊಗೇರ ಅಳ್ವೇಕೋಡಿ ಮೊದಲಾದವರು ಹನುಮಾಮೃತ ದಲ್ಲಿ ಭಕ್ತಿಗೀತೆ ಗಳನ್ನು ಬರೆದಿರುವರು.ಶಿಕ್ಷಕ ಪರಮೇಶ್ವರ ನಾಯ್ಕ ಹಾಗೂ ನಾರಾಯಣ ನಾಯ್ಕ ನಿರ್ವಹಿಸಿದರು. ದೀಕ್ಷಾ ನಾಯ್ಕ ಪ್ರಾರ್ಥಿಸಿದರು.