Important
Trending

ದೇವಸ್ಥಾನ ಕಳ್ಳತನ ಪ್ರಕರಣ: ಆರೋಪಿಗಳನ್ನು ಬಂಧಿಸಿದ ಪೊಲೀಸರು: ಕಳುವು ಮಾಡಿದ್ದ ದೇವಿಯ ಆಭರಣ ವಶಕ್ಕೆ

ಕಾರವಾರ: ಇಲ್ಲಿನ ಚೆಂಡಿಯಾ ನವಚೆಂಡಿಕಾ ದೇವಸ್ಥಾನದಲ್ಲಿ ಇತ್ತಿಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ದೇವಸ್ಥಾನ ಕಳ್ಳತನದ ಆಭರಣ, ಬೆಳ್ಳಿಯ ಗಟ್ಟಿ ಹಾಗೂ ಕೃತ್ಯಕ್ಕೆ ಉಪಯೊಗಿಸಿದ ಹುಂಡೈ ಕಾರು ಹಾಗೂ ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬoಧಿತರನ್ನು ರಾಜಸ್ತಾನ ಸಿರೋಹಿ ಜಿಲ್ಲೆಯ ಪ್ರವೀಣ ಸಿಂಗ್ ಮತ್ತು ಗುಜರಾತ್ ಅಹಮದಾಬಾದ್‌ನ ಸುರೇಶ್‌ಕುಮರ್ ಸೋನಿ (47) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ರಾಜಸ್ತಾನದ ಧರ್ಮೇಂದ್ರ ರಾವ್ ಪರಾರಿಯಾಗಿದ್ದಾನೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿತರ ಪತ್ತೆಗಾಗಿ ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಒಂದು ತಂಡ ರಾಜ್ಯಸ್ಥಾನಕ್ಕೆ, ಮತ್ತೊಂದು ತಂಡ ಗುಜರಾತಗೆ ತೆರಳಿ ಆರೋಪಿತರ ಬಗ್ಗೆ ಖಚಿತ ಮಾಹಿತಿಯನ್ನಾದರಿಸಿ ಅವರನ್ನು ದಸ್ತಗಿರಿ ಮಾಡಿ ವಿಚಾ ರಣೆ ಮಾಡಿದ್ದು, ವಿಚಾರಣೆ ವೇಳೆ ಆರೋಪಿತರು ತಾವು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿ ದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಮಾತ್ರವಲ್ಲದೆ, ರಾಜಸ್ಥಾನ, ಗುಜರಾತ ಮುಂತಾದ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button