Follow Us On

WhatsApp Group
Big News
Trending

ಕಡಲತೀರದಲ್ಲಿ ವಿಶೇಷವಾದ ಮೀನಿನ ಮೃತದೇಹವೊಂದು ಪತ್ತೆ: ಇದು ವಿಷಯಕಾರಿ ಮೀನು ಎಂದ ಕಡಲಜೀವ ಶಾಸ್ತ್ರಜ್ಞರು

ಕಾರವಾರ: ನಗರದ ಅಲಿಗದ್ದಾ ಕಡಲತೀರದಲ್ಲಿ ವಿಶೇಷವಾದ ಮೀನಿನ ಮೃತದೇಹವೊಂದು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.ಈ ಮೀನು ಸಾಮಾನ್ಯ ಮೀನುಗಳಿಗಿಂತ ವಿಭಿನ್ನವಾಗಿದ್ದು ಹತ್ತಾರು ರೆಕ್ಕೆಗಳು ಇದ್ದು ನೋಡುಗರಲ್ಲಿ‌ ಆಶ್ಚರ್ಯ ಮೂಡಿಸಿತ್ತು. ಕಡಲತೀರದಲ್ಲಿ ವಾಯು ವಿಹಾರಕ್ಕೆ ಬಂದವರು ಹಾಗೂ ಪ್ರವಾಸಿಗರು ಕುತೂಹಲದಿಂದ ಈ ಮೀನನ್ನು ವೀಕ್ಷಿಸಿ ಅದನ್ನು ಹಿಡಿದುಕೊಂಡು ಫೊಟೊ ಕ್ಲಿಕ್ಕಿಸಿದರೆ ಕೆಲವರು ಸೆಲ್ಫೀ ತೆಗೆದುಕೊಂಡರು.

ಇನ್ನು ಈ ಬಗ್ಗೆ ಕಡಲ ಜೀವಶಾಸ್ತ್ರ ವಿಭಾಗದ ಡಾ. ಶಿವಕುಮಾರ ಹರಗಿ ಅವರನ್ನು ವಿಚಾರಿಸಿದಾಗ ಮಾಹಿತಿ ನೀಡಿದ ಅವರು ಇದನ್ನು ಲಾಯನ್ ಫಿಷ್ (Lion Fish) ಎಂದು ಕರೆಯಲಾಗುತ್ತದೆ. ಇದೊಂದು ವಿಷಕಾರಿ ಮೀನಾಗಿದ್ದು ಮೀನುಗಾರರ ಏಂಡಿ ಬಲೆಗೆ ಸಾಮಾನ್ಯವಾಗಿ ಸಿಲುಕುತ್ತದೆ. ಹೀಗೆ ಸಿಲುಕಿದ ಮೀನನ್ನು ಅನುಪಯುಕ್ತ ಎಂಬ ಕಾರಣಕ್ಕೆ ಮೀನುಗಾರರು ಬಿಟ್ಟು ಹೋಗಿರಬಹುದು ಎಂದು ಹೇಳಿದರು.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button