ವಿಶೇಷ ಸಂಚಾರ ಕಾರ್ಯಾಚರಣೆ‌: 110 ಪ್ರಕರಣ ದಾಖಲು

ಕಾರವಾರ: ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ವಾಹನ ಅಪಘಾತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಸಂಚಾರ ಕಾರ್ಯಾಚರಣೆ‌ ನಡೆಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್
ಪೆನ್ನೆಕರ್ ಹಾಗೂ ಎಎಸ್ ಪಿ ಬದರಿನಾಥ, ಡಿವೈಎಸ್
ಪಿ ವಾಲೆಂಟೈನ್ ಡಿಸೋಜಾ, ನಗರ ಠಾಣಾ ಇನ್ಸೆಕ್ಟರ್
ಎಸ್. ಎಸ್. ಬಿಳಗಿ ಮಾರ್ಗದರ್ಶನದಲ್ಲಿ ಕಾರವಾರ
ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ
ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ಸುಧೀರ ಗುನಗಾ,
ಮಹೇಶ ದೇವಟ್ಟಿ, ಗದಿಗೆಪ್ಪ ಚಕ್ರಸಾಲಿ, ಮೌಲಾಲಿ
ನದಾಸ್ರವರನ್ನು ಒಳಗೊಂಡ ತಂಡವು ರಸ್ತೆಯಲ್ಲಿ
ಸಂಚರಿಸುವ ವಾಹನಗಳ ತಪಾಸಣೆ ನಡೆಸಿದರು.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳಿಗೆ ಮೊಟಾರು ವಾಹನ ಕಾಯಿದೆ ಅಡಿಯಲ್ಲಿ ಒಟ್ಟು 110 ಪ್ರಕರಣಗಳನ್ನು ದಾಖಲಿಸಿ ರೂ. 56,100 ದಂಡ ವಿಧಿಸಲಾಯಿತು.

ವಿಸ್ಮಯ ನ್ಯೂಸ್ ಕಾರವಾರ

Exit mobile version