Follow Us On

WhatsApp Group
Focus News
Trending

ಪದ್ಮಶ್ರೀ ಸುಕ್ರಜ್ಜಿ ಆರೋಗ್ಯದಲ್ಲಿ ಏರುಪೇರು: ಮಣಿಪಾಲ ಆಸ್ಪತ್ರೆಗೆ ದಾಖಲು

ಅಂಕೋಲಾ: ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ಆರೋಗ್ಯದಲ್ಲಿ ವಯೋಸಹಜ ಕಾರಣಗಳಿಂದ ಆಗಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇದೆ. ಈ ವೇಳೆ ಕಾರವಾರ ಕ್ರಿಮ್ಸ್ ನಲ್ಲಿ ಇಲ್ಲವೇ ಅವರ ಮನೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡಿ,ಆರೋಗ್ಯ ಸುಧಾರಣೆಗೆ ಒತ್ತು ನೀಡುತ್ತ ಬರಲಾಗಿತ್ತು.

ಆದರೆ  ಇಂದು ಮತ್ತೊಮ್ಮೆ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡು ಬಂದಿದ್ದು,ಅಂಕೋಲಾದಿಂದ ಹೊನ್ನಾವರಕ್ಕೆ,ಅಲ್ಲಿಂದ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದ್ದು, ಸುಕ್ರಜ್ಜಿ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.,ಎಲ್ಲರ ಪ್ರೀತಿಯ ಸುಕ್ರಜ್ಜಿ ಶೀಘ್ರ ಚೇತರಿಸಿಕೊಂಡು ಎಲ್ಲರೊಂದಿಗೆ ಈ ಹಿಂದಿನಂತೆ ಲವಲವಿಕೆಯಿಂದ ಓಡಾಡಿಕೊಂಡಿರಲಿ ಎನ್ನುವುದು ಸುಕ್ರಜ್ಜಿ ಅಭಿಮಾನಿಗಳ ಆಶಯವಾಗಿದೆ.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ್ ಅಂಕೋಲಾ

Back to top button