Follow Us On

WhatsApp Group
Important
Trending

ಕೊನೆಗೂ ಮರಳಿ ಮನೆ ಸೇರಿದ ಅನಾಥ ಆಶ್ರಮದಲ್ಲಿ ಇದ್ದ ಮಹಿಳೆ

ಸಿದ್ದಾಪುರ: ಕಳೆದ ಮಾರ್ಚ್ 20 ರಂದು ಪಟ್ಟಣದ ತಿಮ್ಮಪ್ಪ ನಾಯ್ಕ ಸರ್ಕಲ್ ಬಳಿ ಅನಾಥ ಸ್ಥಿತಿಯಲ್ಲಿ ಓಡಾಡುತ್ತಿದ್ದ ವೇಳೆ ಪೊಲೀಸರಿಂದ ಮುಗದೂರಿನ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಮರಳಿ ಮನೆ ಸೇರಿದ್ದಾರೆ. ಮಹಿಳೆಯನ್ನು ಸಾವಿತ್ರಿ ಭಟ್ ಎಂದು ಗುರುತಿಸಿದ್ದು ಅಂದು ಪೊಲೀಸರು ಸಾರ್ವಜನಿಕರ ಕರೆಯ ಮೇರೆಗೆ ಇವರನ್ನು ಆಶ್ರಮಕ್ಕೆ ದಾಖಲಿಸುವ ವೇಳೆ ಅವರು ಯಾವುದೇ ಗುರುತು, ಪರಿಚಯಹೇಳಿರಲಿಲ್ಲ.

ಆಶ್ರಮದ ಮುಖ್ಯಸ್ಥ ಡಾ ನಾಗರಾಜ್ ನಾಯ್ಕ ಅವರು ಪೊಲೀಸರ ಕೋರಿಕೆ ಮೇರೆಗೆ ಮಹಿಳೆಗೆ ಆಶ್ರಯ ನೀಡಿದ್ದರು. ಕೆಲವು ದಿನಗಳ ನಂತರ ಈ ಮಹಿಳೆಯು ತಮ್ಮನ್ನು ಸಾವಿತ್ರಿ ಹೆಗಡೆ ಎಂದು ಪರಿಚಯಿಸಿಕೊಂಡಿದ್ದಲ್ಲದೆ, ಮಗಳು ಬೇರೆ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಾವು ಶಿರಸಿಯ ಗ್ರಾಮವೊಂದರಲ್ಲಿ ಬಾಡಿಗೆ ಮನೆಯಲ್ಲಿದ್ದುದಾಗಿ ಹೇಳಿಕೊಂಡಿದ್ದರು.

ಕೊನೆಗೂ ಈಕೆಯ ಪುತ್ರಿಯನ್ನು ಪತ್ತೆ ಹಚ್ಚಿದ ಪೊಲೀಸರು, ಮಗಳ ಕೋರಿಕೆಯ ಮೇರೆಗೆ ಅವರ ಪರಿಚಯದವರಾದ ಶಿರಸಿ ಕಾರಗದ್ದೆಯ ಎನ್.ಆರ್. ಹೆಗಡೆ ಎಂಬುವವರು ಸಿದ್ದಾಪುರ ಪೊಲೀಸರ ಸಮಕ್ಷಮದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತಪ್ಪ ಜಿ. ಕುಂಬಾರ್, ಪೊಲೀಸ್ ಸಿಬ್ಬಂದಿಗಳು ಹಾಗೂಆಶ್ರಮದ ಮೇಲ್ವಿಚಾರಕಿ ಮಮತಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button