Follow Us On

WhatsApp Group
Big News
Trending

ಮಹಿಳೆ ಮತ್ತು ಈ ವೃದ್ಧನ‌ ಕುರಿತು ಮಾಹಿತಿ ಸಿಕ್ಕರೆ ತಿಳಿಸಿ: ಕೆಳಗಿನ ನಂಬರ್ ಗೆ ಕರೆ ಮಾಡಿ

ಸಿದ್ದಾಪುರ: ಕಳೆದ ಕೆಲವು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನ ಬೇಡ್ಕಣಿಯಲ್ಲಿ ಅಲೆದಾಡುತ್ತಿದ್ದ ವೃದ್ಧ, ಅಸಹಾಯಕ, ಅನಾಥ ವ್ಯಕ್ತಿ ಹಾಗೂ ಪಟ್ಟಣದಲ್ಲಿ ಅಲೆದಾಡುತ್ತಿದ್ದ ಮಹಿಳೆಯೋರ್ವಳ
ನ್ನು ರಕ್ಷಣೆ ಮಾಡಿ ಆಶ್ರಮದಲ್ಲಿ ಆಶ್ರಯ ನೀಡಲಾಗಿದೆ.

ವ್ರದ್ದ ವ್ಯಕ್ತಿ ಹಿಂದಿ ಮಾತನಾಡುತ್ತಿದ್ದು ಯಾವುದೇ ವಿಳಾಸ ಹೆಸರು ಹೇಳುತ್ತಿಲ್ಲ. ಮಹಿಳೆಯು ಗಿರಿಜಾ ಭೋವಿ (ರೇಣುಕಮ್ಮ) ತಂದೆ ಸೀನಾ ಬೋವಿ, ತಾಯಿ ಮಂಜಮ್ಮ, ತಂದೆ ತಾಯಿ ತೀರಿಕೊಂಡಿದ್ದಾರೆ. ವಿಳಾಸ ಇಂದಿರಾನಗರ, ಮೇಗರವಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಅಂತ ತಿಳಿಸಿದ್ದಾರೆ.

ತಾನು ಹೆಬ್ರಿ ಊರಿನ ವ್ಯಕ್ತಿಗೆ ಮದುವೆಯಾಗಿದ್ದು ತನ್ನ ಗಂಡ ಕೂಡ ನಿಧನರಾಗಿದ್ದು ತನಗೆ ಮಕ್ಕಳಿಲ್ಲ.ತಾನು ಅನಾಥೆಯಾಗಿದ್ದೇನೆ ಎಂದು ಹೇಳುತ್ತಿದ್ದಾಳೆ‌. ಹಾಗೂ ತನ್ನ ತಮ್ಮನ ಹೆಸರು ಶಂಕರ, ತಂಗಿಯರ ಹೆಸರು ಲಕ್ಷ್ಮೀ, ಇಂದಿರಾ ಎಂದು ತಿಳಿಸಿದ್ದಾರೆ.

ಈ ಇಬ್ಬರ ಬಗ್ಗೆ ಮಾಹಿತಿ ಇರುವವರು ಸಿದ್ದಾಪುರ ಪೊಲೀಸ್ ಠಾಣೆಯನ್ನು ಅಥವಾ 9481389187, 8073197439 ನಂಬರಿಗೆ ಕರೆ ಮಾಡಿ ತಿಳಿಸುವಂತೆ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಸೇವಾ ಸಮಿತಿ ಮುಖ್ಯಸ್ಥರಾದ ಡಾ. ನಾಗರಾಜ ನಾಯ್ಕ ರವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ‌, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button