Follow Us On

WhatsApp Group
Important
Trending

ಮನೆಯ ಮೇಲೆ ಮರ ಬಿದ್ದು ಮಹಿಳೆಗೆ ಗಾಯ: ಜಿಲ್ಲಾ ಆಸ್ಪತ್ರೆಗೆ ದಾಖಲು

ಹೊನ್ನಾವರ: ರಾತ್ರಿ ಬೀಸಿದ ಗಾಳಿ ಮಳೆಗೆ ಕೆಕ್ಕಾರ್ ಗ್ರಾಮದ ಗುಜ್ನಕ್ಕಿ ಮಜರೆಯ ರುಕ್ಮಿಣಿ ವಾಸುದೇವ ದೇಶಬಂಡಾರಿ ಯವರ ಮನೆಯ ಮೇಲೆ ಕಾಡು ಜಾತಿಯ ಮರ ಮುರಿದುಬಿದ್ದಿದೆ. ಮರ ಬಿದ್ದ ಬಿದ್ದು ಮನೆಯ ಮೇಲಾವಣಿ ಸಂಪೂರ್ಣ ಹಾನಿಯಾಗಿದ್ದು, ರುಕ್ಮಿಣಿ ವಾಸುದೇವ ದೇಶಬಂಡಾರಿ ಇವರ ಮೇಲೆ ಮೇಲ್ಛಾಚಾವಣಿಗೆ ಹಾಕಿದ ಸಿಮೆಂಟ್ ಶೀಟ್ ಬಿದ್ದು ಎಡ ಕೈ ಮುರಿದಿದೆ.

ಇವರನ್ನು 108 ವಾಹನದಲ್ಲಿ ಕುಮಟಾದ ಸರ್ಕಾರಿ ಆಸ್ಪತ್ರೆ ಚಿಕಿತ್ಸೆನೀಡಿ ನಂತರ ಹೆಚ್ಚಿನ ಚಿಕತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಮನೆಗೆ ತೀವ್ರ ಹಾನಿಯಾಗಿದ್ದು ಅಂದಾಜು ರೂ. 100000 ಹಾನಿಯಾಗಿದೆ ಎಂದು ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ನೀಡಿದಾರೆ,

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button