Follow Us On

WhatsApp Group
Focus News
Trending

ರಾಷ್ಟ್ರಮಟ್ಟದ ಹೊನಲು ಬೆಳಕಿನ ಬೀಚ್ ವಾಲಿಬಾಲ್ ಪಂದ್ಯಾವಳಿ ಮುಂದೂಡಿಕೆ

ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖಾ ವತಿಯಿಂದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಬೀಚ್ ವಾಲಿಬಾಲ್ ಪಂದ್ಯಾವಳಿಯನ್ನು ಹೊನ್ನಾವರ ತಾಲೂಕಿನ ಕಾಸರಗೋಡ ಇಕೋ ಬೀಚ್ ಕಡಲತೀರದಲ್ಲಿ ಮೇ 27, 28 ಮತ್ತು 29ರಂದು ಆಯೋಜಿಸಲಾಗಿದೆ.

ಆದರೆ ಮೇ 15ರಿಂದ ಹವಾಮಾನ ಇಲಾಖೆಯು ಮನ್ಸೂನ್ಆಗಮನದ ಕುರಿತು ರೆಡ್ ಅಲರ್ಟ್ ನೀಡಿದೆ. ಹೀಗಾಗಿ ಪಂದ್ಯಾವಳಿಯನ್ನು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ತಿಂಗಳೊಳಗೆ ಆಯೋಜಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ
ಇಲಾಖೆ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Back to top button